ADVERTISEMENT

ಮೊಹರಂ ಅಂಗವಾಗಿ ಹಸೇನ್‌, ಹುಸೇನ್‌ಗೆ ಶಿಯಾ ಮುಸ್ಲಿಮರ ರಕ್ತತರ್ಪಣ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 3:07 IST
Last Updated 14 ಜುಲೈ 2025, 3:07 IST
ದೊಡ್ಡಬಳ್ಳಾಪುರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ಹಸೇನ್‌, ಹುಸೇನ್‌ ಆಚರಣೆ ವೇಳೆ ಭಾನುವಾರ ಸಾವಿರಾರು ಸಂಖ್ಯೆಯೆಯಲ್ಲಿ ಸೇರಿದ್ದ ಶಿಯಾ ಮುಸ್ಲಿಮರು
ದೊಡ್ಡಬಳ್ಳಾಪುರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ಹಸೇನ್‌, ಹುಸೇನ್‌ ಆಚರಣೆ ವೇಳೆ ಭಾನುವಾರ ಸಾವಿರಾರು ಸಂಖ್ಯೆಯೆಯಲ್ಲಿ ಸೇರಿದ್ದ ಶಿಯಾ ಮುಸ್ಲಿಮರು   

ದೊಡ್ಡಬಳ್ಳಾಪುರ: ಮೊಹರಂ ಅಂಗವಾಗಿ ಭಾನುವಾರ ನಗರದ ಕೋಟೆ ರಸ್ತೆಯ ಕಿಲ್ಲಾ ಮಸೀದಿಯಲ್ಲಿ ಹಸೇನ್‌, ಹುಸೇನ್‌ ಆಚರಣೆ ಶ್ರದ್ಧಾ,ಭಕ್ತಿಗಳಿಂದ ನಡೆಯಿತು.

ಮೊಹರಂ ನಂತರ ಏಳು ದಿನಕ್ಕೆ ನಡೆಯುವ ಹಸೇನ್‌, ಹುಸೇನ್‌ ಆಚರಣೆಯಲ್ಲಿ ದೇಶಧ ವಿವಿಧ ಮೂಲೆಗಳಿಂದ ಬಂದಿದ್ದ ಶಿಯಾ ಮುಸ್ಲಿಂ ಪಂಗಡದ ಸಾವಿರಾರು ಜನರು ಕಪ್ಪು ಉಡುಪು ಧರಿಸಿ ಭಾಗವಹಿಸಿದ್ದರು. 

ದೊಡ್ಡಬಳ್ಳಾಪುರದಲ್ಲಿ ನಡೆಯುವ ಈ ಧಾರ್ಮಿಕ ಆಚರಣೆಗೆ ಸುಮಾರು 268 ವರ್ಷಗಳ ಇತಿಹಾಸವಿದೆ.  

ADVERTISEMENT

ಅಂಜುಮನ್‌–ಎ–ಹೈದರಿಯ ಸಂಘಟನೆ ಮತ್ತು ಹುಸೇನ್‌ ಕಮಿಟಿ ನೇತೃತ್ವದಲ್ಲಿ ನಡೆದ ಮೊಹರಂ ಉತ್ಸವದಲ್ಲಿ ಮುಸ್ಲಿಂ ಧರ್ಮಗುರುಗಳು ಧಾರ್ಮಿಕ ವಿಧಿ,ವಿಧಾನ ನೆರವೇರಿಸಿದರು.

ಸಹಸ್ರಾರು ಶಿಯಾ ಮುಸ್ಲಿಂ ಪಂಗಡದವರು ಬ್ಲೇಡು, ಕತ್ತಿ ಮೊದಲಾದ ಹರಿತವಾದ ಆಯುಧಗಳಿಂದ ಎದೆ, ಮೈಕೈ ಹೊಡೆದುಕೊಳ್ಳುವ ಮೂಲಕ ರಕ್ತವನ್ನು ತಮ್ಮ ಆರಾಧ್ಯ ದೈವ ಹುಸೇನ್‌ಗೆ ಅರ್ಪಿಸಿದರು. ಇಮಾಮ್‌ ಹುಸೇನ್‌ ತ್ಯಾಗ ಬಲಿದಾನ ಸ್ಮರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.