
ಪ್ರಜಾವಾಣಿ ವಾರ್ತೆ
ನಂದಗುಡಿ (ಹೊಸಕೋಟೆ): ಇಲ್ಲಿನ ಗ್ರಾಮಸ್ಥರು ಮೃತಪಟ್ಟ ಕೋತಿಯ ಅಂತ್ಯಸಂಸ್ಕಾರ ನಡೆಸಿ, ಸಮಾಧಿ ಕಟ್ಟಿದ್ದಾರೆ.
ಗ್ರಾಮದ ಪಶ್ಚಿಮಕ್ಕಿರುವ ಅರಣ್ಯ ಪ್ರದೇಶದಿಂದ ಆಹಾರಕ್ಕೆ ವಲಸೆ ಬಂದ ಮಂಗಗಳ ಗುಂಪಿನಲ್ಲಿಯ ಮಂಗವೊಂದು ಆಕಸ್ಮಿಕವಾಗಿ ಹಳೆಊರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಅಭಯ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿನ ವಿದ್ಯುತ್ ತಂತಿ ತಗುಲಿ
ಮೃತಪಟ್ಟಿತ್ತು.
ಇದನ್ನು ಗಮನಿಸಿದ ನಂದಗುಡಿಯ ಚೇತನ್ ಮತ್ತು ಸ್ನೇಹಿತರು ಮೃತಪಟ್ಟ ಕೋತಿ ಅಂತಿಮ ಸಂಸ್ಕಾರ ನಡೆಸಿ, ಸಮಾಧಿ ನಿರ್ಮಾಣ ಮಾಡಿದ್ದಾರೆ.
ನಿವೃತ್ತ ಶಿಕ್ಷಕ ಮುನೇಗೌಡ, ಚನ್ನಕೇಶವ, ರೋಹನ್, ಅಂಜನಪ್ಪ, ಅರುಣ್ ಕುಮಾರ್, ಕದಿರಪ್ಪ, ಪೈಂಟ್ ಬಾಬು, ಗಾರೆ ಮುಲಾಂಜನಿ, ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.