
ದೊಮ್ಮಸಂದ್ರ (ಆನೇಕಲ್): ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಮುನೇಶ್ವರ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರ ಮತ್ತು ಕಾಳಿಕಾದೇವಿ, ಕಾಲಭೈರವೇಶ್ವರ ಸ್ವಾಮಿ, ನಾಗರಕಲ್ಲು ದೇವಾಲಯವನ್ನು ಮಂಗಳವಾರ ಉದ್ಘಾಟಿಸಲಾಯಿತು.
ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಮಾವಿನಕೆರೆ ಶನೇಶ್ವರ ಸ್ವಾಮಿ ದೇವಾಲಯ ಜಯಪ್ರಸಾದ್ ಆಚಾರ್ಯ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿಸಿದವು.
ದೇವಾಲಯದ ಉದ್ಘಾಟನೆಯ ಪ್ರಯುಕ್ತ ಮಹಿಳೆಯರು ಐದು ಕಿ.ಮೀ.ಗೂ ಹೆಚ್ಚು ದೂರ ಮಂಗಲಕಲಶ ಹೊತ್ತು ಮೆರವಣಿಗೆ ನಡೆಸಿದರು. ಹಳ್ಳಿಕಾರ್ ರಾಸುಗಳು, ವೀರಗಾಸೆ, ಡೊಳ್ಳುಕುಣಿತ, ನಗಾರಿ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಸಮೀಪದ ಭರತನಾಟ್ಯ, ಸುಗಮ ಸಂಗೀತ, ಕೋಲಾಟ ಪ್ರದರ್ಶನ ನಡೆಯಿತು.
ದೊಡ್ಡಬಳ್ಳಾಪುರದ ತೊಟದ ಪುಷ್ಟಾಂಡಜ ಗುರು ಪೀಠದ ದಿವ್ಯ ಜ್ಞಾನಾನಂದ ಸ್ವಾಮೀಜಿ, ಪ್ರಣವಾನಂದಪುರಿ ಸ್ವಾಮಿ, ಸಚ್ಚಿದಾನಂದ ಯೋಗಿ, ಬಸವನಾಗದೇವ ಶರಣ, ರಾಜಾಪುರ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ರತ್ನ ಕುಮಾರಸ್ವಾಮಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹೋಮಗಳಲ್ಲಿ ಭಾಗವಹಿಸಿದ್ದರು. ಮುನೇಶ್ವರ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷ ನಾಗೇಶ್, ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಿನಾಥ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮುಖಂಡರಾದ ಟಿ.ವಿ.ಬಾಬು, ರವೀಂದ್ರ, ರಾಜೇಶ್ವರಿ, ಮುನಿರಾಜು, ನಾರಾಯಣಸ್ವಾಮಿ ಮೊದಲಿಯಾರ್, ಧನರಾಜ್ , ಮೋಹನ್ ಬಾಬು, ಅಣಕರಹಳ್ಳಿ ಕೃಷ್ಣಪ್ಪ, ಸುರೇಶ್, ರವೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.