ADVERTISEMENT

ಯೋಧರ ಹಿತ ಕಾಪಾಡಿದ ಮೋದಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:09 IST
Last Updated 18 ಸೆಪ್ಟೆಂಬರ್ 2020, 14:09 IST
ಮೋದೀಜಿ ಬಾಯ್ಸ್ ವತಿಯಿಂದ ಬಿ.ಎಸ್.ಎಫ್‌ ಯೋಧರನ್ನು ಸನ್ಮಾನಿಸಲಾಯಿತು
ಮೋದೀಜಿ ಬಾಯ್ಸ್ ವತಿಯಿಂದ ಬಿ.ಎಸ್.ಎಫ್‌ ಯೋಧರನ್ನು ಸನ್ಮಾನಿಸಲಾಯಿತು   

ದೊಡ್ಡಬಳ್ಳಾಪುರ: ಇಲ್ಲಿನ ಮೋದಿಜಿ ಬಾಯ್ಸ್‌‌ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿ.ಎಸ್.ಎಫ್‌ ಯೋಧರು, ಕೊರೊನಾ ವಾರಿಯರ್ಸ್‍ ಹಾಗೂ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ನಗರದ ರಾಘವೇಂದ್ರಸ್ವಾಮಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ, ‘ಮೋದಿ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಜನರ ಹಿತವನ್ನು ಕಾಪಾಡಿದ್ದಾರೆ. ಇಡೀ ಜಗತ್ತಿನಲ್ಲಿ ಜನಪ್ರಿಯ ಪ್ರಧಾನಿ ಎಂದು ಹೆಸರು ಪಡೆದಿರುವುದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮಹನೀಯರ ಆದರ್ಶ ಗುಣಗಳನ್ನು ಹೊಂದಿರುವ ಶಿಸ್ತಿನ ಸಿಪಾಯಿಯಂತಿರುವ ಮೋದಿ ಅವರನ್ನು ಪ್ರಧಾನಿಯಾಗಿ ಪಡೆದಿರುವುದು ಈ ದೇಶದ ಹೆಮ್ಮೆ’ ಎಂದರು.

ಬಿ.ಎಸ್.ಎಫ್‌ ಯೋಧ ಸಿ.ನಾರಾಯಣಸ್ವಾಮಿ ಮಾತನಾಡಿ, ‘2014ಕ್ಕೂ ಹಿಂದೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿತ್ತು. 2014ರಲ್ಲಿ ಮೋದಿ ಅವರು ಪ್ರಧಾನಿ ಅದ ಮೇಲೆ ನಮಗೆ ಬುಲೆಟ್ ಪ್ರೂಫ್‌ ಜಾಕೆಟ್‌, ಬುಲೆಟ್ ಪ್ರೂಫ್‌ ವಾಹನಗಳನ್ನು ಒದಗಿಸಿ ಕೊಟ್ಟು ಯೋಧರಿಗೆ ನೈತಿಕ ಸ್ಥೈರ್ಯವನ್ನು ತುಂಬಿದ್ದಾರೆ. ಯೋಧರ ಹಿತ ಕಾಪಾಡುವ ಪ್ರಧಾನಿಗೆ ನಮ್ಮ ಕೃತಜ್ಞತೆಗಳು’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಮೋದಿಜಿ ಬಾಯ್ಸ್‌ ಸ್ಥಾಪಕ ನರೇಂದ್ರ, ಸದಸ್ಯರಾದ ಗಂಗಾಧರ್, ರಘು, ಗೌತಮ್ ಹಾಗೂ ಹಿಂದೂ ಜಾಗರಣ ವೇದಿಕೆ ಆನಂದ್ ತುಮಕೂರು, ಧೀರಜ್ ಮುನಿರಾಜ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನಿರ್ದೇಶಕ ಎನ್.ಕೆ.ರಮೇಶ್, ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರಾದ ಪಿ.ಮುನಿರಾಜು, ಮುಖಂಡರಾದ ಗಾಲಿ ಬಸವರಾಜು, ವೆಂಕಟೇಶ್‌ಬಂತಿ, ರಾಮಣ್ಣ, ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.