ADVERTISEMENT

ರಾಷ್ಟ್ರಕವಿ ಗೋವಿಂದ ಪೈ ಅವರ ಜನ್ಮ ದಿನ: ಮಾರ್ಚ್ 23ರಂದು ಕವನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 23:56 IST
Last Updated 19 ಫೆಬ್ರುವರಿ 2025, 23:56 IST
<div class="paragraphs"><p> ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ</p></div>

ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ

   

ಬೆಂಗಳೂರು: ರಾಷ್ಟ್ರಕವಿ ಗೋವಿಂದ ಪೈ ಅವರ ಜನ್ಮ ದಿನದ ಅಂಗವಾಗಿ ಮಾರ್ಚ್‌ 23ರಂದು ಕನ್ನಡ ಸಂಘರ್ಷ ಸಮಿತಿಯು ಉದಯೋನ್ಮುಖ ಕವಿ–ಕವಯಿತ್ರಿಯರಿಗೆ ಕವನ ಸ್ಪರ್ಧೆ ಆಯೋಜಿಸಿದೆ.

ಈವರೆಗೆ ಒಂದೂ ಕನವ ಸಂಕಲನ ಹೊರತರದ ಉದಯೋನ್ಮುಖರು, ‘ನಾಡು–ನುಡಿ, ಸಾಹಿತ್ಯ, ಕನ್ನಡ ನಾಡಿನ ಪರಂಪರೆ’ ಕುರಿತಾದ ಒಂದು ಸ್ವರಚಿತ ಕವನವನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದು. ಸ್ಪರ್ಧೆಯಲ್ಲಿ ಗೆದ್ದವರಿಗೆ ‍ಪ್ರಥಮ ಬಹುಮಾನ ₹2500, ದ್ವಿತೀಯ ಬಹುಮಾನ ₹2000 ಹಾಗೂ ತೃತೀಯ ಬಹುಮಾನ ₹1500 ನಗದು ನೀಡಲಾಗುವುದು.

ADVERTISEMENT

‌ಸ್ಪರ್ಧೆಗೆ ಕವನ ಕಳುಹಿಸಲು ಕೊನೆ ದಿನ ಮಾರ್ಚ್ 5. ಕವನವನ್ನು ಎ.ಎಸ್.ನಾಗರಾಜಸ್ವಾಮಿ, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಬೆಂಗಳೂರು–56 ವಿಳಾಸಕ್ಕೆ ಕಳುಹಿಸಬೇಕು. ಕವನದ ಜೊತೆಗೆ, ₹50 ಪ್ರವೇಶ ಶುಲ್ಕ ಇದೆ. ಹೆಚ್ಚಿನ ಮಾಹಿತಿಗಾಗಿ 9739001410ಕ್ಕೆ ಸಂಪರ್ಕಿಸಬಹುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.