ADVERTISEMENT

ಗಮನ ಸೆಳೆದ ‘ನಾಟ್ಯರಾಣಿ ಶಾಂತಲಾ’ ನಾಟಕ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:36 IST
Last Updated 29 ಜನವರಿ 2026, 5:36 IST
ಆನೇಕಲ್ ವಿಧಾತ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ನಾಟ್ಯರಾಣಿ ಶಾಂತಲಾ ನಾಟಕ ಪ್ರದರ್ಶಿಸಿದರು
ಆನೇಕಲ್ ವಿಧಾತ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ನಾಟ್ಯರಾಣಿ ಶಾಂತಲಾ ನಾಟಕ ಪ್ರದರ್ಶಿಸಿದರು   

ಆನೇಕಲ್: ಪಟ್ಟಣದ ವಿಧಾತ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ನಾಟ್ಯರಾಣಿ ಶಾಂತಲಾ’ ನಾಟಕವು ಪ್ರೇಕ್ಷಕರ ಕಣ್ಮನ ಸೆಳೆಯಿತು. 

ವಿದ್ಯಾರ್ಥಿಗಳ ನಾಟಕೋತ್ಸವದಲ್ಲಿ ವಿಧಾತ್‌ ವಿದ್ಯಾ ಸಂಸ್ಥೆಯ 120 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 9ನೇ ತರಗತಿಯ ವಿದ್ಯಾರ್ಥಿನಿ ನವ್ಯ ಶಾಂತಲಾ ಪಾತ್ರಧಾರಿಯಾಗಿ, 10ನೇ ತರಗತಿಯ ಉದಯ್‌ ವಿಷ್ಣುವರ್ಧನನ ಪಾತ್ರದಲ್ಲಿ ಗಮನ ಸೆಳೆದರು. ನಾಟ್ಯರಾಣಿ ಶಾಂತಲೆಯಲ್ಲಿ ನವ್ಯಳ ಪಾತ್ರ  ಮೋಹಕವಾಗಿತ್ತು. ಲೇಖಕ ತಾ.ನಂ.ಕುಮಾರಸ್ವಾಮಿ ಅವರು ಹೊಯ್ಸಳ ಸಾಮ್ರಾಜ್ಯದ ಮುನಿಗಳಾದ ಸುದಾತ್ತಾಚಾರ್ಯ ಮುನಿಗಳ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅ.ದೇವೇಗೌಡ, ವಿಧಾತ್‌ ವಿದ್ಯಾ ಸಂಸ್ಥೆಯ ಟಿ.ಕೆ.ವಿಧಾತ್‌, ಪ್ರಾಚಾರ್ಯೆ ಕನಕ, ಖಜಾಂಚಿ ಪಿ.ನಾಗರಾಜು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.