ದೇವನಹಳ್ಳಿಯ ಐತಿಹಾಸಿಕ ಕೋಟೆ ವೇಣುಗೋಪಾಲಸ್ವಾಮಿಗೆ ನವಿಲುಗಿರಿ ಅಲಂಕಾರ
ದೇವನಹಳ್ಳಿ: ಪಟ್ಟಣದ ಪ್ರಮುಖ ದೇಗುಲಗಳಲ್ಲಿ ನವರಾತ್ರಿ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ನೂರಾರು ಭಕ್ತರು ನಿತ್ಯ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ವಿವಿಧ ದೇಗುಲಗಳಲ್ಲಿ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿದ್ದು, ಅದು ಭಕ್ತರ ಕಣ್ಮನ ಸೆಳೆಯುತ್ತಿದೆ.
ವಿವಿಧ ಪೂಜಾ ಕಾರ್ಯಕ್ರಮಗಳು, ಭಜನೆಗಳು ಶಕ್ತಿದೇವತೆಗಳನ್ನುಆರಾಧಿಸುತ್ತಾ ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಿದ್ದಾರೆ.
ಹರಕೆ ಮಾಡಿಕೊಂಡಿರುವ ಭಕ್ತರು ವಿವಿಧ ಬಗೆಯ ಪ್ರಸಾದವನ್ನು ಸ್ವಾಮಿಗೆ ನೈವೇದ್ಯ ಮಾಡಿ, ಭಕ್ತರಿಗೆ ಹಂಚಿದರು. ಪಟ್ಟಣದ ಚೌಡೇಶ್ವರ ದೇವಿ, ಕೋಟಿ ವೇಣುಗೋಪಾಲಸ್ವಾಮಿದ ದೇಗುಲ, ಮಾರಮ್ಮ ದೇವಿ ಗುಡಿಯಲ್ಲಿ ಅದ್ದೂರಿಯಾಗಿ ಪೂಜೆ ವಿಧಿ ವಿಧಾನವನ್ನು ನೆರವೇರಿಸಲಾಯಿತು.
ಬ್ರಿಗೇಡ್ ಅಪಾರ್ಟ್‌ಮೆಂಟ್ ಸಮುಚ್ಛಯದಲ್ಲಿ ನವದುರ್ಗೆಯರ ಮಹೋತ್ಸವ ಹಮ್ಮಿಕೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಆಚರಣೆ ಮಾಡುವ ರೀತಿಯಲ್ಲಿ ದುರ್ಗೆಯನ್ನು ಪ್ರತಿಷ್ಠಾಪನೆ ಮಾಡಿ, ವಿವಿಧ ಮನೋರಂಜನಾ ಕಾರ್ಯಕ್ರಮ, ಧಾರ್ಮಿಕ ಸಂಗೀತ ಕಾರಂಜಿ ಹಮ್ಮಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.