ADVERTISEMENT

ಭಕ್ತರ ರೋಮಾಂಚನಗೊಳಿಸಿದ ಒನಕೆ ನಾಟ್ಯ

​ಪ್ರಜಾವಾಣಿ ವಾರ್ತೆ
Published 15 ಮೇ 2025, 11:44 IST
Last Updated 15 ಮೇ 2025, 11:44 IST
ದೊಡ್ಡಬಳ್ಳಾಪುರದಲ್ಲಿ ಬುಧವಾರ ಸಂಜೆ ಶ್ರೀಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವದ ಅಂಗವಾಗಿ ಏಳು ಸುತ್ತಿನ ಕೋಟೆ ಆವರಣದಲ್ಲಿ ಒನಕೆ ನಾಟ್ಯ ಮತ್ತು ವಸಂತೋತ್ಸವ ಆಚರಣೆ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ಬುಧವಾರ ಸಂಜೆ ಶ್ರೀಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವದ ಅಂಗವಾಗಿ ಏಳು ಸುತ್ತಿನ ಕೋಟೆ ಆವರಣದಲ್ಲಿ ಒನಕೆ ನಾಟ್ಯ ಮತ್ತು ವಸಂತೋತ್ಸವ ಆಚರಣೆ ನಡೆಯಿತು   

ದೊಡ್ಡಬಳ್ಳಾಪುರ: ನಗರದಲ್ಲಿ ಶ್ರೀಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವದ ಅಂಗವಾಗಿ ದೇವಾಲಯದ ಸಮೀಪದ ಏಳು ಸುತ್ತಿನ ಕೋಟೆ ಆವರಣದಲ್ಲಿ ಒನಕೆ ನಾಟ್ಯ ಮತ್ತು ವಸಂತೋತ್ಸವ ಆಚರಣೆ ಬುಧವಾರ ಸಡಗರದಿಂದ ನಡೆಯಿತು.

ಕರಗ ಹೊತ್ತಿದ್ದ ಪೂಜಾರಿ ಮುನಿರತ್ನಂ ಬಾಲಾಜಿ ಪೂಜೆ ಸಲ್ಲಿಸಿ, ಒನಕೆ ಹಾಗೂ ಓಕುಳಿ ನೀರಿನ ತಪ್ಪಲೆಯನ್ನು ತಲೆಯ ಮೇಲಿಟ್ಟುಗೊಂಡು ನೀಡಿದ ನಾಟ್ಯ ಪ್ರದರ್ಶನ ನೆರೆದಿದ್ದ ಭಕ್ತಾದಿಗಳನ್ನು ರೋಮಾಂಚನಗೊಳಿಸಿತು.

ದೇವಾಲಯ ಹಾಗೂ ಸುತ್ತಮುತ್ತಲ ಮನೆಗಳ ಮೇಲಿಂದ ನೂರಾರು ಜನ ಭಕ್ತರು ನಾಟ್ಯವನ್ನು ವೀಕ್ಷಿಸಿದರು. ಇದರೊಂದಿಗೆ ವಹ್ನಿಕುಲ ಮತಸ್ಥರು ಓಕುಳಿ ನೀರನ್ನು ಎರಚುತ್ತಾ, ಮಡಿಕೆ ಹೊಡೆಯುವ ವಸಂತೋತ್ಸವ ಆಚರಣೆಯನ್ನು ಉತ್ಸಾಹ ಸಂಭ್ರಮಗಳಿಂದ ಆಚರಿಸಿದರು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಮಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಶ್ರೀಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವ ನಗರದಲ್ಲಿ ವಿಜೃಂಭಣೆಯಿಂದ ನಡೆದಿದ್ದು, ಮೇ 5 ರಂದು ಆರಂಭವಾದ ಧಾರ್ಮಿಕ ಕಾರ್ಯಗಳು ಮೇ.20ರಂದು ಮಾರಿಯಮ್ಮ ದೇವಿ, ಪಿಳೇಕಮ್ಮ ದೇವಿ, ಶ್ರೀ ಮುತ್ಯಾಲಮ್ಮ ದೇವಿ, ಶ್ರೀ ದೊಡ್ಡಮ್ಮ ದೇವಿಗೆ ಆರತಿಗಳನ್ನು ಬೆಳಗುವ ಮೂಲಕ ಸಮಾರೋಪಗೊಳ್ಳಲಿದೆ.

ದೊಡ್ಡಬಳ್ಳಾಪುರದಲ್ಲಿ ಬುಧವಾರ ಸಂಜೆ ಶ್ರೀಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವದ ಅಂಗವಾಗಿ ಏಳು ಸುತ್ತಿನ ಕೋಟೆ ಆವರಣದಲ್ಲಿ ಒನಕೆ ನಾಟ್ಯ ಮತ್ತು ವಸಂತೋತ್ಸವ ಆಚರಣೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.