ADVERTISEMENT

ವಿಜಯಪುರ: 14ಕ್ಕೆ ಸಾವಯವ ಕೃಷಿ-ಸುಗ್ಗಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 4:47 IST
Last Updated 12 ಜನವರಿ 2026, 4:47 IST
ವಿಜಯಪುರದ ಬಸವೇಶ್ವರನಗರದ ವಿಜಯ ವಿನಾಯಕಸ್ವಾಮಿ ದೇವಾಲಯದಲ್ಲಿ ಸಾವಯವ ಕೃಷಿಕರೊಂದಿಗೆ ‘ಸಾವಯವ ಸಂತೆ-ಸುಗ್ಗಿ ಸಂಭ್ರಮ’ ಕುರಿತು ಸಭೆ ನಡೆಯಿತು
ವಿಜಯಪುರದ ಬಸವೇಶ್ವರನಗರದ ವಿಜಯ ವಿನಾಯಕಸ್ವಾಮಿ ದೇವಾಲಯದಲ್ಲಿ ಸಾವಯವ ಕೃಷಿಕರೊಂದಿಗೆ ‘ಸಾವಯವ ಸಂತೆ-ಸುಗ್ಗಿ ಸಂಭ್ರಮ’ ಕುರಿತು ಸಭೆ ನಡೆಯಿತು   

ವಿಜಯಪುರ (ದೇವನಹಳ್ಳಿ):  ಸಂಸ್ಕೃತಿ ಸಂಪ್ರದಾಯ, ಗ್ರಾಮೀಣ ಬದುಕಿನ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜ.14 ರಂದು ಮಧ್ಯಾಹ್ನ 3 ರಿಂದ ಸಂಜೆ 6.30 ರವರೆಗೆ ಸಾವಯವ ಕೃಷಿಕರ ಸಹಯೋಗಲ್ಲಿ ‘ಸಾವಯವ ಕೃಷಿ-ಸುಗ್ಗಿ ಸಂಭ್ರಮ’  ಆಯೋಜಿಸಲಾಗಿದೆ ಎಂದು ಸಾವಯವ ಕೃಷಿ ಸಂತೆಯ ಸಂಚಾಲಕ ಬಿ.ಕೆ.ದಿನೇಶ್ ತಿಳಿಸಿದ್ದಾರೆ.

ಇಲ್ಲಿನ ಬಸವೇಶ್ವರನಗರದ ವಿಜಯ ವಿನಾಯಕಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಸಾವಯುವ ಕೃಷಿಕರೊಂದಿಗೆ ಸಭೆ ನಡೆಸಿ ಮಾತನಾಡಿ, ಸಂಕ್ರಾಂತಿ ಹಬ್ಬದ ಅಂಗವಾಗಿ ಮಂಡಿಬೆಲೆ ರಸ್ತೆಯ ವಿ.ಎಸ್.ಆರ್. ರಮೇಶ್ ಅವರ ತೋಟದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಕಳೆದ 26 ವಾರಗಳಿಂದ ಬಸವೇಶ್ವರನಗರದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಸಂತೆ ಯಶಸ್ವಿಯಾಗಿ ನಡೆಯುತ್ತಿದ್ದು, ಇದೀಗ ಅದಕ್ಕೆ ಸಂಕ್ರಾಂತಿಯ ಸಡಗರವನ್ನು ಸೇರಿಸಿ ಸುಗ್ಗಿ ಸಂಭ್ರಮದ ರೂಪದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳ ಗಾಯನ, ಜನಪದ ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಕಿಚ್ಚು ಹಾಯಿಸುವ ಸಂಪ್ರದಾಯ, ಎತ್ತಿನ ಬಂಡಿಯಲ್ಲಿ ಮಕ್ಕಳ ಸವಾರಿ, ಮಡಿಕೆ ಹೊಡೆಯುವುದು, ಗಾಳಿಪಟ ಹಾರಿಸುವುದು ಹೀಗೆ ಅನೇಕ ಗ್ರಾಮೀಣ ಹಾಗೂ ಜನಪದ ಸಂಸ್ಕೃತಿ ಒಳಗೊಂಡ ಗ್ರಾಮೀಣ ಬದುಕನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಪ್ರವೇಶ ಉಚಿತವಾಗಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕೃಷಿಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಸಾವಯವ ಕೃಷಿಕರಾದ ಆವತಿ ಗ್ರಾಮದ ಅನಿಲ್, ವೆಂಕಟೇಶ್, ಬೋದಗೂರಿನ ವೆಂಕಟಶಾಮರೆಡ್ಡಿ, ಹಾರೋಹಳ್ಳಿಯ ಕೃಷ್ಣಮೂರ್ತಿ, ಅಟ್ಟೂರು ಸೋಮಶೇಖರ್, ರಮೇಶ್, ಧರ್ಮಪುರದ ವೀರಭದ್ರ, ನಕ್ಕನಹಳ್ಳಿಯ ಪ್ರಸಾದ್, ನಡುಪನಾಯಕನಹಳ್ಳಿಯ ಶ್ರೀಧರ್, ಅರಿಕೆರೆಯ ನಾರಾಯಣಸ್ವಾಮಿ, ಬಸವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.