ADVERTISEMENT

ಸಲೂನ್‌ಗೆ ಬೆಂಕಿ: ಶಾರ್ಟ್‌ ಸರ್ಕ್ಯೂಟ್ ಎಂದುಕೊಂಡಿದ್ದ ಘಟನೆಯ ಹಿಂದಿತ್ತು ‘ದ್ವೇಷ’

ನಾಲ್ವರನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 2:30 IST
Last Updated 14 ಜನವರಿ 2023, 2:30 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಸಲೂನ್‌ಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಸಲೂನ್‌ಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ   

ಆನೇಕಲ್: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಲೂನ್‌ವೊಂದಕ್ಕೆ ಬೆಂಕಿ ಹಚ್ಚಿದ್ದ ಮೂವರು ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿಗೆ ಹುಡುಕಾಟ ನಡೆಸಿದ್ದಾರೆ.

ಆನೇಕಲ್‌ನ ಶಿವಕುಮಾರ್, ತಮಿಳುನಾಡಿನ ಉಮೇಶ್, ಹರೀಶ್‌, ಮಣಿ ಬಂಧಿತರು. ಪ್ರಮುಖ ಆರೋಪಿ ಶಿವಕುಮಾರ್‌ ತಲೆ ಮರೆಯಿಸಿಕೊಂಡಿದ್ದಾನೆ.

ಡಿ.31ರ ರಾತ್ರಿ ಚಂದಾಪುರದ ವಿಷ್‌ ಫ್ಯಾಮಿಲಿ ಸಲೂನ್‌ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಪರಿಕರಗಳು ನಾಶವಾಗಿದ್ದವು. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿತ್ತು. ಸಲೂನ್‌ನ ಮಾಲೀಕರು ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಟ ಸಂಭವಿಸಿದೆ ಎಂದು ಸೂರ್ಯನಗರ ಠಾಣೆಗೆ ದೂರು ದಾಖಲಿಸಿದ್ದರು.

ADVERTISEMENT

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಸಿಸಿಟಿವಿ ಕ್ಯಾಮರ ಡಿವಿಆರ್‌ ಪರಿಶೀಲಿಸಿದಾಗ ಆರೋಪಿಗಳು ಸಲೂನ್‌ಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುತ್ತಿರುವ ದೃಶ್ಯ ಕಂಡು ಬಂದಿದೆ. ಇದನ್ನು ಆಧಾರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿಚಾರಣೆ ನಡೆಸಿದಾಗ ಸಲೂನ್‌ನ ಮಾಲೀಕರಾದ ಬೇಬಿ ರಾಣಿ ಮತ್ತು ಪುಷ್ಪ ಎಂಬುವವರ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಾದವಿದ್ದು, ದ್ವೇಷದ ಹಿನ್ನೆಲೆಯಲ್ಲಿ ಪುಷ್ಪ ಅವರ ಸೂಚನೆಯಂತೆ ಶಿವಕುಮಾರ್‌ ಮತ್ತು ತಂಡದವರು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದ್ದು ಪೊಲೀಸರು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.