ADVERTISEMENT

ಹೊಸಕೋಟೆ | 'ಅಧಿಕಾರ ಹಸ್ತಾಂತರ ಚರ್ಚೆ ಸದ್ಯಕ್ಕಿಲ್ಲ'

ರಾಜ್ಯದ ಮೇಲಿಲ್ಲ ಬಿಹಾರ ಚುನಾವಣೆ ಫಲಿತಾಂಶ ಪ್ರಭಾವ; ಶಾಸ ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 2:17 IST
Last Updated 17 ನವೆಂಬರ್ 2025, 2:17 IST
ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರಿನಲ್ಲಿ ಅಂಬೇಡ್ಕರ್ ಕಾಲೊನಿಯ ಅಂಬೇಡ್ಕರ್ ಮಹಾದ್ವಾರ ಉದ್ಘಾಟಿಸಿದ ಶಾಸಕ ಶರತ್‌ ಬಚ್ಚೇಗೌಡ
ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರಿನಲ್ಲಿ ಅಂಬೇಡ್ಕರ್ ಕಾಲೊನಿಯ ಅಂಬೇಡ್ಕರ್ ಮಹಾದ್ವಾರ ಉದ್ಘಾಟಿಸಿದ ಶಾಸಕ ಶರತ್‌ ಬಚ್ಚೇಗೌಡ   

ಅನುಗೊಂಡನಹಳ್ಳಿ(ಹೊಸಕೋಟೆ): ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಾನುವಾರ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆಗಾಗಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.  ಅಧಿಕಾರ ಹಸ್ತಾಂತರ ವಿಷಯ ಚರ್ಚೆ ಇಲ್ಲ. ಬಿಹಾರ ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾಗಿ ಬಂದಂತಹ ಸಂದರ್ಭದಲ್ಲಿ ಯಾರು ತಾನೇ ಅಧಿಕಾರ ಹಸ್ತಾಂತರ ವಿಷಯ ಚರ್ಚಿಸುತ್ತಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೋಬಳಿಯ ಮುತ್ಕೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫಲಿತಾಂಶ ಏನೇ ಬರಲಿ ನಾವು ನಿಮ್ಮ ಹಿಂದೆ ಇದ್ದೀವಿ ಎಂಬ ಮನೋಸ್ಥೈರ್ಯ ತುಂಬಲು ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಇದನ್ನು ಬೇರೆ ಅರ್ಥದಲ್ಲಿ ಭಾವಿಸುವುದು ಬೇಡ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗುತ್ತೇವೆ’ ಎಂದು ಹೇಳಿದರು.

ತಪ್ಪು ದಾರಿಯ ಗೆಲವು:ಪ್ರಜಾಪ್ರಭುತ್ವಕ್ಕೆ ಮಾರಕ: ಮೊದಲೇ ಊಹಿಸಿದಂತೆ ಎಸ್ಐಆರ್‌ನಲ್ಲಿ ಮತಕಳವು ಮಾಡಿರುವುದು, ಚುನಾವಣೆ ಆಯೋಗವನ್ನು ಕೇಂದ್ರ ಸರ್ಕಾರ ತನ್ನ ಕೈಬೊಂಬೆಯಾಗಿ ಮಾಡಿಕೊಂಡಿದೆ. ಚುನಾವಣಾ ಪೂರ್ವದಲ್ಲೇ ಸುಮಾರು 1.20 ಕೋಟಿ ಮಹಿಳೆಯರ ಖಾತೆಗೆ ₹10,000 ಸಾವಿರ ಹಾಕುವ ಮೂಲಕ ಹಾಗೂ ಹಲವು ಆಮಿಷ ಒಡ್ಡಿ ಎನ್‌ಡಿಎ ಗೆಲುವು ಸಾಧಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ದೂರಿದರು.

ADVERTISEMENT

2028ರಲ್ಲೂ ಗ್ಯಾರಂಟಿ ‘ಕೈ’ ಹಿಡಿಯಲಿದೆ ಬಿಹಾರ ಚುನಾವಣಾ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪ್ರಭಾವ ಬಿರುವುದಿಲ್ಲ. ನಮ್ಮ ಸರ್ಕಾರ ಕೈಗೊಳ್ಳುತ್ತಿರುವ ಕಲ್ಯಾಣ ಕಾರ್ಯಕ್ರಮಗಳೇ ಕ್ರಾಂತಿಕಾರ ಬದಲಾವಣೆ ತಂದಿವೆ. ಅವು ಮುಂದಿನ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಿವೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.