ADVERTISEMENT

ಶಿವಕುಮಾರ ಸ್ವಾಮೀಜಿ ಗುಣಮುಖರಾಗಲು ರುದ್ರಾಭಿಷೇಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 12:37 IST
Last Updated 11 ಡಿಸೆಂಬರ್ 2018, 12:37 IST
ರುದ್ರಾಭಿಷೇಕದಲ್ಲಿ ಪಾಲ್ಗೊಂಡಿದ್ದ ಮುಖಂಡರು
ರುದ್ರಾಭಿಷೇಕದಲ್ಲಿ ಪಾಲ್ಗೊಂಡಿದ್ದ ಮುಖಂಡರು   

ದೇವನಹಳ್ಳಿ: ಇಲ್ಲಿನ ವೀರ ಭದ್ರೇಶ್ವರ ದೇವಾಲಯದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯಲ್ಲಿ ಗುಣಮುಖರಾಗಲಿ ಎಂದು ಲಿಂಗಾಯತ ಸಮುದಾಯದ ವಿವಿಧ ಘಟಕದ ಮುಖಂಡರು ರುದ್ರಾಭಿಷೇಕ ನಡೆಸಿ ಪೂಜೆ ಸಲ್ಲಿಸಿದರು.

ಪುರಸಭೆ ಸದಸ್ಯ ವೈ.ಸಿ.ಸತೀಶ್ ಮತ್ತು ವೀರಶೈವ ಲಿಂಗಾಯತ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ಮಾತನಾಡಿ, ’ನಡೆದಾಡವ ದೇವರು, ಪವಾಡ ಪುರುಷ, ಶತಾಯುಷಿ ಶಿವಕುಮಾರಸ್ವಾಮಿ ಅವರ ಸೇವೆ ನಾಡಿನ ಉದ್ದಗಲಕ್ಕೂ ಇದೆ. ವಿಶ್ವ ಕಂಡ ಮಹಾನ್ ತ್ರಿದಾಸೋಹ ಸಾಕಾರಮೂರ್ತಿ, ಅನ್ನ, ಶಿಕ್ಷಣ, ವಸತಿ ನೀಡಿ ಸರ್ಕಾರ ಮಾಡದ ಅದ್ಭುತ ಸಾಧನೆಯನ್ನು ಮಾಡುತ್ತಾ ಸಾಗಿದ್ದಾರೆ. ಅವರು ಇನ್ನಷ್ಟು ವರ್ಷ ಇರಬೇಕು ಎಂಬುದು ಕೇವಲ ಈ ಸಮುದಾಯದ ಕೋರಿಕೆಯಲ್ಲ. ನಾಡಿನ ಮತ್ತು ದೇಶದ ಸಮಸ್ತ ಜನತೆಯೆ ಕೋರಿಕೆ‘ ಎಂದರು.

’ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡುತ್ತಾ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ನಡೆಸುವುದು ಅಷ್ಟು ಸುಲಭವಲ್ಲ. ಪ್ರಗತಿಯ ಮಾರ್ಗ ಸೂಚಕರಾಗಿ ಸಾವಿರಾರು ಶಿಷ್ಯರನ್ನು ಹೊಂದಿರುವ ಅವರು ದೀರ್ಘಕಾಲ ಬದುಕಲಿ ಎಂಬುದು ನಮ್ಮ ಆಶಯವಾಗಿದೆ’ ಎಂದರು.

ವೀರಶೈವ ಲಿಂಗಾಯತ ಸಮಾಜ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಎಸ್. ವಿಜಯ ಕುಮಾರ್, ನಗರ್ತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಮಂಜುನಾಥ್, ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ಪಿ. ಕೃಷ್ಣ, ವೀರಶೈವ ಆರ್ಚಕರ ಸಂಘ ಅಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ದಯಾನಂದ್, ಮುಖಂಡರಾದ ವೀರಭದ್ರಪ್ಪ, ನಳಿನಾ, ಗೀತಾ, ಜಗದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT