ADVERTISEMENT

ಆನೇಕಲ್‌ನಲ್ಲಿ ಹಬ್ಬಕ್ಕೆ ಭರದ ಸಿದ್ಧತೆ: ಗಗನಕ್ಕೇರಿದ ಹೂವಿನ ಬೆಲೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 6:25 IST
Last Updated 4 ನವೆಂಬರ್ 2021, 6:25 IST
ಆನೇಕಲ್ ಮಾರುಕಟ್ಟೆಯಲ್ಲಿ ದೀಪಾವಳಿ ಆಚರಣೆಗೆ ಜನರು ಸಾಮಗ್ರಿಗಳನ್ನು ಕೊಳ್ಳುವಲ್ಲಿ ನಿರತರಾಗಿರುವ ದೃಶ್ಯ
ಆನೇಕಲ್ ಮಾರುಕಟ್ಟೆಯಲ್ಲಿ ದೀಪಾವಳಿ ಆಚರಣೆಗೆ ಜನರು ಸಾಮಗ್ರಿಗಳನ್ನು ಕೊಳ್ಳುವಲ್ಲಿ ನಿರತರಾಗಿರುವ ದೃಶ್ಯ   

ಆನೇಕಲ್: ತಾಲ್ಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಸಂಪ್ರದಾಯದಂತೆ ಆಚರಣೆ ಮಾಡಲು ಇಲ್ಲಿನ ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳನ್ನು ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರುಸೇರಿದ್ದರು.

ಹೂವು, ಹಣ್ಣು, ನೋಮುದಾರ, ಗೆಜ್ಜೆ, ಬಾಗಿನ, ಬಣ್ಣದ ದಾರ, ಮಣ್ಣಿನ ದೀಪಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಹಬ್ಬಕ್ಕಾಗಿ ಕೊಳ್ಳುವುದು ವಾಡಿಕೆ. ಒಂದು ಜೊತೆ ಬಾಗಿನದ ಮೊರ ₹ 300ಗೂ ಹೆಚ್ಚಾಗಿತ್ತು. ಹೂವಿನ ಬೆಲೆ ಗಗನಕ್ಕೇರಿತ್ತು. ಒಂದು ಮಾರು ಸೇವಂತಿಗೆ ಹೂವು ₹ 150ರಿಂದ ₹ 200ಕ್ಕೆ ಮಾರಾಟವಾಗುತ್ತಿತ್ತು.

ದೀಪಾವಳಿಯ ವಿಶೇಷ ಕಜ್ಜಾಯ ತಯಾರಿಕೆಗೆ ಅಕ್ಕಿ ಮತ್ತು ಬೆಲ್ಲ ಬಳಕೆ ಮಾಡುತ್ತಾರೆ. ಬೆಲ್ಲ ಮತ್ತು ಅಡುಗೆ ಎಣ್ಣೆಯ ಬೆಲೆಯು ಏರಿಕೆಯಾಗಿತ್ತು. ಬೆಲೆ ಏರಿಕೆಯ ನಡುವೆಯೂ ಸಾಂಪ್ರದಾಯಿಕ ಆಚರಣೆಗೆ ಅವಶ್ಯಕ ಸಾಮಗ್ರಿಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಜನ ಜಮಾಯಿಸಿದ್ದ ದೃಶ್ಯ ಸಂಜೆ ಕಂಡು ಬಂದಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.