ಹೊಸಕೋಟೆ: ಸಾರಿಗೆ ಇಲಾಖೆಯ ಮುಷ್ಕರದಿಂದಾಗಿ ಜನತೆಗೆ ಸಮಸ್ಯೆಯಾಗದಂತೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಂತೆ ಖಾಸಗಿ ವಾಹನಗಳು ರಸ್ತೆಗಿಳಿದಿವೆ. ನಗರದ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸುಗಳು ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ದೃಶ್ಯ ನಗರದಲ್ಲಿ ಕಾಣಿಸಿತು.
ಒಂದು ವಾರದಿಂದ ನಡೆಯುತ್ತಿರುವ ಮುಷ್ಕರ ನಿರತ ಸಿಬ್ಬಂದಿಯ ಜೊತೆಗಿನಹಲವು ಸುತ್ತುಮಾತುಕತೆಗಳು ವಿಫಲವಾದವು. ಸರ್ಕಾರ ನಿರ್ಧಾರದಂತೆ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಿಲ್ಲದಷ್ಟು ಖಾಸಗಿ ವಾಹನಗಳು ರಸ್ತೆಗಿಳಿದಿವೆ.
ಜೊತೆಗೆ ಆಟೊ, ಮ್ಯಾಕ್ಸಿ ಕ್ಯಾಬ್‌ಗಳು ಹೆಚ್ಚಾಗಿ ಓಡಾಡುತ್ತಿರುವುದರಿಂದ ಜನರು ನಿರಾತಂಕವಾಗಿ ಪ್ರಯಾಣಿಸುತ್ತಿದ್ದಾರೆ.
ಕೋಲಾರ, ಚಿಂತಾಮಣಿ ಮತ್ತು ಮಾಲೂರುಗಳ ಕಡೆಗೂ ಖಾಸಗಿ ಬಸ್ ಸಂಚಾರಜೋರಾಗಿಯೇ ಇದೆ. ಒಟ್ಟಿನಲ್ಲಿ ತಾಲ್ಲೂಕಿನಲ್ಲಿ ಸಾರಿಗೆ ಇಲಾಖೆಯ ಮುಷ್ಕರದಿಂದಾಗಿ ಜನತೆಗೆ ಹೆಚ್ಚಿನ ಸಮಸ್ಯೆಯಾಗಿಲ್ಲ ಎನ್ನುತ್ತಿದ್ದಾರೆ ಪ್ರಯಾಣಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.