ಆನೇಕಲ್: ಕಾಡಾನೆಗಳ ಹಾವಳಿ ತಪ್ಪಿಸಬೇಕು. ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ರಕ್ಷಣ ನೀಡಬೇಕು ಎಂದು ಒತ್ತಾಯಿಸಿ ರೈತರು ಪಟ್ಟಣದ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ರೈತ ತೆಲಗರಹಳ್ಳಿ ರಮೇಶ್ ಮಾತನಾಡಿ, ‘ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಆನೆಗಳ ದಾಳಿಯಿಂದಾಗಿ ಹಾಳಾಗುತ್ತಿದೆ. ಪ್ರತಿದಿನ ರೈತರು ನಿದ್ದೆಗೆಟ್ಟು ಬೆಳೆ ಕಾಯಬೇಕಾಗಿದೆ. ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಸರ್ಕಾರದಿಂದ ಬೆಳೆ ಹಾನಿಯ ಪರಿಹಾರ ನೀಡುತ್ತಿಲ್ಲ. ಹಾಗಾಗಿ ವಣಕನಹಳ್ಳಿ, ಸೋಲೂರು, ಸುಣವಾರ, ತೆಲಗರಹಳ್ಳಿ, ಇಂಡ್ಲವಾಡಿ, ಮೆಣಸಿಗನಹಳ್ಳಿ ಭಾಗದ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದರು.
ರೈತರು ಪ್ರತಿಭಟನೆ ನಡೆಸಿ ಆನೇಕಲ್ ವಲಯ ಅರಣ್ಯ ಅಧಿಕಾರಿ ಭರತ್ ಅವರಿಗೆ ಮನವಿ ಸಲ್ಲಿಸಿದರು. ರೈತರ ಸೋಲೂರು ಮಂಜುನಾಥ್, ಬಸವರಾಜು, ಅಣ್ಣಯ್ಯ, ವೇಣು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.