ADVERTISEMENT

ದೇವನಹಳ್ಳಿ | ಶ್ರಾವಣದಲ್ಲಿ ಶೌಚಾಲಯ ಪುರಾಣ!

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 30 ಜುಲೈ 2025, 1:44 IST
Last Updated 30 ಜುಲೈ 2025, 1:44 IST

ಹೊಸದಾಗಿ ನಿರ್ಮಿಸಿರುವ ಸಾರ್ವಜನಿಕ ಮೂತ್ರಾಲಗಳು (ಎಡಚಿತ್ರ), ಶಿಡ್ಲಘಟ್ಟ ಕ್ರಾಸ್ ಬಳಿಯ ನಿರ್ವಹಣೆ ಇಲ್ಲದ ಶೌಚಾಲಯ

ಹೊಸದಾಗಿ ನಿರ್ಮಿಸಿರುವ ಸಾರ್ವಜನಿಕ ಮೂತ್ರಾಲಗಳು (ಎಡಚಿತ್ರ), ಶಿಡ್ಲಘಟ್ಟ ಕ್ರಾಸ್ ಬಳಿಯ ನಿರ್ವಹಣೆ ಇಲ್ಲದ ಶೌಚಾಲಯ

ವಿಜಯಪುರ (ದೇವನಹಳ್ಳಿ): ನಿರ್ವಹಣೆ ಕೊರತೆಯಿಂದ ಪಟ್ಟಣದ ನಾಲ್ಕು ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಹೊಸದಾಗಿ ನಿರ್ಮಿಸಿರುವ ಸಾರ್ವಜನಿಕ ಮೂತ್ರಾಲಯ ಕಟ್ಟಡಗಳು ಇನ್ನೂ ಸಾರ್ವಜನಿಕರ ಸೇವೆಗೆ ಲಭ್ಯವಿಲ್ಲ.

ADVERTISEMENT

ಬಸ್ ನಿಲ್ದಾಣದ ಬಳಿ ಹಾಗೂ ಹಿಂಭಾಗ, ಪುರಸಭೆ ಮುಂಭಾಗ, ಸಂತೆ ಮೈದಾನದ ಸಾರ್ವಜನಿಕ ಶೌಚಾಲಯ ಬಳಸಲು ಜನರು ಹಿಂಜರಿಯುತ್ತಿದ್ದಾರೆ.

ಶಿಡ್ಲಘಟ್ಟ ಕ್ರಾಸ್ ಬಳಿಯ ಶೌಚಾಲಯ ಸ್ವಚ್ಛ ಮಾಡದೆ ಎಷ್ಟು ದಿನಗಳಾಗಿವೇಯೋ ಗೊತ್ತಿಲ್ಲ. ಆದರೆ, ಶೌಚಾಲಯದ ಆವರಣ ಸಿನಿಮಾ ಹಾಗೂ ಇತರ ಪೋಸ್ಟರ್‌ ಅಂಟಿಸಲು ಸದ್ಬಳಕೆಯಾಗುತ್ತಿದೆ. ವಾರಕ್ಕೊಮ್ಮೆ ತೆರೆಯುವ ಸಂತೆ ಮೈದಾನದ ಶೌಚಾಲಯ ಬಳಸಲು ಯೋಗ್ಯವಿಲ್ಲ.

ಬಸ್ ನಿಲ್ದಾಣ ಹಾಗೂ ಕಸ ವಿಲೇವಾರಿ ಘಟಕದ ಹಿಂಭಾಗದ ಸಾರ್ವಜನಿಕ ಶೌಚಾಲಯಗಳು ಗಬ್ಬು ನಾರುತ್ತಿವೆ. ವಾಟರ್ ಟ್ಯಾಂಕ್ ಬಳಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಸ್ವಚ್ಛ ಭಾರತ ಮಿಷನ್ ಯೋಜನೆ-2 ಅಡಿ ಏಳು ತಿಂಗಳ ಹಿಂದೆ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

ಹೊರವಲಯದ ಸರ್ಕಾರಿ ಆಸ್ಪತ್ರೆ ಹಾಗೂ ಗಾಂಧಿ ಚೌಕದಿಂದ ಸ್ಮಶಾನಕ್ಕೆ ತೆರಳುವ ಮೋರಿ ಸಮೀಪ ಸಾರ್ವಜನಿಕ ಮೂತ್ರಾಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ನಾಮಫಲಕ ಬರೆಸಿ ಹಲವು ದಿನ ಕಳೆದಿದೆ. ಈವರೆಗೆ ಸಾರ್ವಜನಿಕರಿಗೆ ಬಳಕೆಗೆ ಸಿದ್ಧಗೊಂಡಿಲ್ಲ. ಬದಲಿಗೆ ಕಟ್ಟಡದ ಸುತ್ತ ಗಿಡಗಂಟಿ ಬೆಳೆದು ನಿಂತಿವೆ.

ಗಾಂಧಿಚೌಕ, ಕೋಲಾರ ರಸ್ತೆ ಬಳಿಯ ಸಾರ್ವಜನಿಕ ಶೌಚಾಲಯ ತೆರೆದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದರೆ, ಜನರ ಈ ಕೂಗು ಪುರಸಭೆಯ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ ಎನ್ನುತ್ತಾರೆ ಪಟ್ಟಣದ ಜನರು.

ಸಾರ್ವಜನಿಕ ಶೌಚಾಲಯ ಸ್ವಚ್ಛತೆ ಕಾಪಾಡಬೇಕಾದ ಪುರಸಭೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನಲು ಈ ಶೌಚಾಲಯಗಳೇ ಜೀವಂತ ಸಾಕ್ಷಿ!

ಜನರ ಬಳಕೆಗೆ ಯೋಗ್ಯವಲ್ಲ! ಪಟ್ಟಣದ ವ್ಯಾಪ್ತಿಯಲ್ಲಿ ಕೇವಲ ನಾಲ್ಕು ಶೌಚಾಲಯ ಕಾರ್ಯ ನಿರ್ವಹಿಸುತ್ತಿವೆ. ನಿರ್ವಹಣೆ ಕೊರತೆ ಕಾರಣ ಉಳಿದ ಶೌಚಾಲಯ ಬಳಸಲು ಜನರು ಹಿಂಜರಿಯುತ್ತಿದ್ದಾರೆ.

ಮೂಗು ಮುಚ್ಚಿಕೊಂಡು ಒಳಗೆ ಕಾಲಿಟ್ಟು ಜಲಬಾಧೆ, ಮಲಬಾಧೆ ತೀರಿಸಿಕೊಂಡರೂ ನಂತರ ರೋಗ ಭೀತಿ ಶುರುವಾಗುತ್ತದೆ. ಕೆಲವೊಂದು ಶೌಚಾಲಯಗಳಲ್ಲಿ ಹಣ ಪಾವತಿಸಿ ಉಪಯೋಗಿಸುವ ವ್ಯವಸ್ಥೆ ಇದೆ. ಅಲ್ಲಿಯೂ  ಸ್ವಚ್ಛತೆ ಸಮಸ್ಯೆಯಿಂದ ಸಾರ್ವಜನಿಕರು ಬಳಕೆಗೆ ಹಿಂಜರಿಯುತ್ತಾರೆ.

ಉದ್ಯಾನದಲ್ಲಿನ ಶೌಚಾಲಯಕ್ಕೆ ಬೀಗ ಪಟ್ಟಣದ ಜಯಚಾಮರಾಜೇಂದ್ರ ಒಡೆಯರ್ ಬಡವಾಣೆ ಉದ್ಯಾನ ಆವರಣದೊಳಗೆ ನೂತನವಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಇನ್ನೂ ಸಾರ್ವಜನಿಕ ಬಳಕೆಗೆ ಒದಗಿಸಿಲ್ಲ. ಇದರಿಂದ ಉದ್ಯಾನಕ್ಕೆ ಬೆಳಗ್ಗೆ ಮತ್ತು ಸಂಜೆ ಬರುವ ವಾಯುವಿಹಾರಿಗಳು ಮಲ, ಮೂತ್ರವಿಸರ್ಜನೆಗೆ ಪರದಾಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.