ADVERTISEMENT

Video: ಭಾರಿ ಮಳೆಗೆ‌ ದಾರಿ ತಪ್ಪಿ ಗ್ರಾಮದ ಕಡೆಗೆ ಬಂದ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 4:49 IST
Last Updated 19 ಅಕ್ಟೋಬರ್ 2022, 4:49 IST
   

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲುಕುಡಿ ಬೆಟ್ಟದ ಸಾಲಿನ ಸುಮಾರು 16 ಕ್ಕು ಹೆಚ್ಚಿನ ಕೆರೆಗಳು ಒಂದು ವಾರದಿಂದಲು ತುಂಬಿ ಕೋಡಿ ಹರಿಯುತ್ತಿವೆ. ಹೀಗಾಗಿ‌ ಕೆರೆ ಅಂಚಿನಲ್ಲಿ ಆಶ್ರಯ ಪಡೆದಿದ್ದ ಹೆಬ್ಬಾವು ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ದಾರಿ ತಪ್ಪಿ ಗ್ರಾಮದ ಕಡೆಗೆ ಬಂದಿದೆ.

ಹೆಚ್ಚಿನ ನೀರುಗಳು ಕೆರೆ ಹಾಗೂ ಕೆರೆ ಸುತ್ತಮುತ್ತಲಿನ ಹಳ್ಳಗಳಲ್ಲಿ ಹರಿಯುತ್ತಿವೆ. ಹೀಗಾಗಿ‌ ಹುಲುಕುಡಿ ಬೆಟ್ಟದ ತಪ್ಪಲಿನ ಕಡೆಗೆ ಹೋಗಲು ಸಾಧ್ಯವಾಗದೆ ತಿಪ್ಪೂರು ಗ್ರಾಮದ ಕಡೆಗೆ ಬಂದಿದೆ. ಬುಧವಾರ ಬೆಳಿಗ್ಗೆ ಗ್ರಾಮದ ಸಮೀಪ ಹೆಬ್ಬಾವನ್ನು ಕಂಡ ಜನ ಅದನ್ನು ರಕ್ಷಿಸಿ ಮತ್ತೆ ಬೆಟ್ಟದ ತಪ್ಪಲಿನ ಕುರುಚಲು ಕಾಡಿಗೆ ಬಿಟ್ಟಿದ್ದಾರೆ. ಹಬ್ಬಾವನ್ನು ನೋಡಲು ತಿಪ್ಪೂರು ಹಾಗೂ ಅಕ್ಕಪಕ್ಕದ ನೂರಾರು ಜನ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT