ADVERTISEMENT

ಆನೇಕಲ್: ಗಮನ ಸೆಳೆದ ಸರ್ಕಾರಿ ಶಾಲೆ ಉಳಿಸಿ ನೃತ್ಯರೂಪಕ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 2:02 IST
Last Updated 28 ಡಿಸೆಂಬರ್ 2025, 2:02 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಬನ್ನೇರುಘಟ್ಟದ ಚಂಪಕಧಾಮ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಉಳಿಸಿ ನೃತ್ಯ ರೂಪಕ ಪ್ರದರ್ಶಿಸಿದರು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಬನ್ನೇರುಘಟ್ಟದ ಚಂಪಕಧಾಮ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಉಳಿಸಿ ನೃತ್ಯ ರೂಪಕ ಪ್ರದರ್ಶಿಸಿದರು   

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟದ ಚಂಪಕಧಾಮ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಸರ್ಕಾರಿ ಶಾಲೆ ಉಳಿಸಿ ನೃತ್ಯರೂಪಕ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಶಿವಕುಮಾರ ಸ್ವಾಮೀಜಿ, ಸಾಲುಮರದ ತಿಮ್ಮಕ್ಕ, ಪುನೀತ್ ರಾಜಕುಮಾರ್ ಅವರ ಚಿತ್ರಪಟಗಳನ್ನು ಹಿಡಿದು ಆಕರ್ಷಕ ಗೀತೆಗಳಿಗೆ ನೃತ್ಯ ನಡೆಸಿದರು. ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ನಟಿ ಪ್ರೇಮ ಮಾತನಾಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿರುತ್ತಾರೆ. ಅವರಿಗೆ ಸುಪ್ತ ಅವಕಾಶಗಳು ಮತ್ತು ವೇದಿಕೆಯನ್ನು ಕಲ್ಪಿಸಬೇಕು. ಆಗ ಅವರಲ್ಲಿನ ಪ್ರತಿಭೆಗಳು ಹೊರಬರುತ್ತದೆ ಎಂದರು.

ADVERTISEMENT

ಚಂಪಕಧಾಮ ಶಾಲೆಯ ಮುಖ್ಯಸ್ಥ ಎ.ಸಂಪತ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ, ಮುಖ್ಯ ಶಿಕ್ಷಕ ಅಶ್ವಥ್‌ನಾರಾಯಣ, ನೃತ್ಯ ಪಟು ಡಿ.ವಿ.ಶ್ರೀನಿವಾಸ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.