ADVERTISEMENT

ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ: ಮತದಾನಕ್ಕೆ ಮಳೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 6:23 IST
Last Updated 3 ಸೆಪ್ಟೆಂಬರ್ 2021, 6:23 IST
ದೊಡ್ಡಬಳ್ಳಾಪುರ ಖಾಸ್‌ಬಾಗ್‌ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಲು ಜನರು ಸರದಿ ಸಾಲಿನಲ್ಲಿ ನಿಂತಿರುವುದು
ದೊಡ್ಡಬಳ್ಳಾಪುರ ಖಾಸ್‌ಬಾಗ್‌ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಲು ಜನರು ಸರದಿ ಸಾಲಿನಲ್ಲಿ ನಿಂತಿರುವುದು   

ದೊಡ್ಡಬಳ್ಳಾಪುರ: ನಗರಸಭೆ 31 ವಾರ್ಡ್‌ಗಳ ಮತದಾನ ಶುಕ್ರವಾರ ಬೆಳಿಗ್ಗೆ 7ಗಂಟೆಯಿಂದ ಆರಂಭವಾಗಿದೆ. 11ಗಂಟೆ ಸುಮಾರಿಗೆ ಶೇ13 ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆಯಿಂದಲೇ ಜಡಿ ಮಳೆ ಸುರಿಯುತ್ತಿರುವುದರಿಂದ ಮತದಾನಕ್ಕೆ ಅಡ್ಡಿಯಾಗಿದ್ದು, ಮತದಾನ ಮಂದಗತಿಯಲ್ಲಿ ನಡೆಯುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಮನೆಗಳಿಂದ ಕರೆತರಲು ಆಟೊ ಸೌಲಭ್ಯ ಕಲ್ಪಿಸಿದ್ದಾರೆ.

ನಗರದ ಎಲ್ಲ ಮತಗಟ್ಟೆಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಮತದಾನ ಆರಂಭವಾಗಿದೆ.
ನಗರದ ಕೊಂಗಾಡಿಯಪ್ಪ ಕಾಲೇಜು, ಪ್ರೌಢಶಾಲೆಯಲ್ಲಿಯೇ ಹೆಚ್ಚಿನ ಮತಗಟ್ಟೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನದಟ್ಟಣೆ ಉಂಟಾಗಿದೆ. ಮತಗಳ ಎಣಿಕೆ ಸೆ.6ರಂದು ಕೊಂಗಾಡಿಯಪ್ಪ ಕಾಲೇಜಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT