
ಪ್ರಜಾವಾಣಿ ವಾರ್ತೆ
ಆನೇಕಲ್: ಹೃದಯಾಘಾತದಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಸಹೋದರ ಸತ್ಯನಾರಾಯಣ ರಾವ್ ಯೋಗಕ್ಷೇಮ ವಿಚಾರಿಸಲು ನಟ ರಜನಿಕಾಂತ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಪತ್ನಿ ಲತಾ, ಪುತ್ರಿಯರಾದ ಸೌಂದರ್ಯ ಮತ್ತು ಐಶ್ವರ್ಯ ಅವರು ರಜನಿಕಾಂತ್ ಜೊತೆಗಿದ್ದರು. ಚೆನ್ನೈನಿಂದ ನೇರವಾಗಿ ಆಸ್ಪತ್ರೆಗೆ ಬಂದ ಅವರು ಸಹೋದರನ ಆರೋಗ್ಯ, ಯೋಗಕ್ಷೇಮ ವಿಚಾರಿಸಿದ ನಂತರ ವೈದ್ಯರಿಂದ ಮಾಹಿತಿ ಪಡೆದರು.
ರಜನಿಕಾಂತ್ ಆಸ್ಪತ್ರೆಗೆ ಬಂದಿರುವ ವಿಷಯ ತಿಳಿಯುತ್ತಲೇ ನೂರಾರು ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಆಸ್ಪತ್ರೆ ಎದುರು ಜಮಾಯಿಸಿದರು. ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.