ADVERTISEMENT

ಕನ್ನಡ ಉಳಿದಿರುವುದು ಹಳ್ಳಿಗಳಿಂದ: ಎ.ವಿ.ಮುರಳಿಧರ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:04 IST
Last Updated 11 ನವೆಂಬರ್ 2025, 2:04 IST
ಅರಳುಮಲ್ಲಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ ಶೇ100ರಷ್ಟು ಅಂಕ ಪಡೆದ ಎಂ.ಸವಿತಳನ್ನು ಸತ್ಕರಿಸಲಾಯಿತು.
ಅರಳುಮಲ್ಲಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ ಶೇ100ರಷ್ಟು ಅಂಕ ಪಡೆದ ಎಂ.ಸವಿತಳನ್ನು ಸತ್ಕರಿಸಲಾಯಿತು.   

ದೊಡ್ಡಬಳ್ಳಾಪುರ: ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ.ವೆಂಕಟರಾಮಯ್ಯ ನೆನಪಿನಲ್ಲಿ ನಗದು ಪುರಸ್ಕಾರ ವಿತರಿಸಿ ಮಾತನಾಡಿದರು.

ಕನ್ನಡ ಭಾಷೆಯ ನಿಜವಾದ ಸೊಗಡು ಇಂದಿಗೂ ಉಳಿದಿರುವುದು ಗ್ರಾಮೀಣ ಭಾಗದಲ್ಲಿ. ಗ್ರಾಮೀಣ ಮಕ್ಕಳು ಕೀಳರಿಮೆಯನ್ನು ಬಿಟ್ಟು ಮುನ್ನಡೆಯುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ವಕೀಲ ಎ.ವಿ.ಮುರಳಿಧರ್ ಹೇಳಿದರು.

ADVERTISEMENT

ಶಾಲೆಯ ಮುಖ್ಯಶಿಕ್ಷಕಿ ಸ್ವರ್ಣಗೌರಿ,ಸಹ ಶಿಕ್ಷಕರಾದ ಎಂ.ಭೈರೆಗೌಡ,ಎನ್. ಆರ್.ಶಿವಕುಮಾರ್, ಆರ್.ರೇಖಾ, ಎನ್.ಶಿವಶಂಕರ್, ಸುಜಾತ, ದೈಹಿಕ ಶಿಕ್ಷಕ ವೆಂಕಟೇಶಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.