
ಹೊಸಕೋಟೆ: ಆಂಧ್ರ ಪ್ರದೇಶದ ತಿರುಪತಿಯಿಂದ ಕದ್ದು ತಂದು ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನೀಲಿಗಿರಿ ತೋಪಿನಲ್ಲಿ ಅಡಗಿಸಿ ಇಟ್ಟಿದ್ದ ಸುಮಾರು ₹1 ಕೋಟಿ ಬೆಲೆ ಬಾಳುವ ರಕ್ತಚಂದನದ 180 ತುಂಡುಗಳನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ವಶಪಡಿಸಿಕೊಂಡದ್ದಾರೆ.
ಆರೋಪಿಗಳು ಆಂಧ್ರ ಪ್ರದೇಶದ ತಿರುಪತಿಯಿಂದ ರಕ್ತ ಚಂದನ ಕದ್ದು ತಂದು ಇಲ್ಲಿ ಅಡಗಿಸಿಟ್ಟಿದ್ದರು. ಈ ಕುರಿತು ನೆರೆಯ ಆಂಧ್ರದ ತಿರುಪತಿ ಪೊಲೀಸ್ ಠಾಣೆಯಲ್ಲಿ ರಕ್ತ ಚಂದನ ಕಳುವಿನ ಪ್ರಕರಣ ದಾಖಲಾಗಿತ್ತು.
ಆಂಧ್ರ ಪ್ರದೇಶ ಮತ್ತು ತಿರುಮಶೆಟ್ಟಿಹಳ್ಳಿ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿಕೊಂಡು ರಕ್ತಚಂದನವನ್ನು ಆಂಧ್ರ ಪ್ರದೇಶದ ಪೊಲೀಸರಿಗೆ ಒಪ್ಪಿಸಿದ್ದಾರೆ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.