ADVERTISEMENT

‘ದೇವಾಲಯಗಳಿಂದ ಧಾರ್ಮಿಕ ಸಾಮರಸ್ಯ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 19:45 IST
Last Updated 7 ನವೆಂಬರ್ 2019, 19:45 IST
ವಿಜಯಪುರ ಹೋಬಳಿ ಇರಿಗೇನಹಳ್ಳಿ ವೇಣುಗೋಪಾಲಸ್ವಾಮಿ ದೇವಾಲಯ ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ₹ 2 ಲಕ್ಷದ ಚೆಕ್ ನೀಡಿದರು
ವಿಜಯಪುರ ಹೋಬಳಿ ಇರಿಗೇನಹಳ್ಳಿ ವೇಣುಗೋಪಾಲಸ್ವಾಮಿ ದೇವಾಲಯ ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ₹ 2 ಲಕ್ಷದ ಚೆಕ್ ನೀಡಿದರು   

ವಿಜಯಪುರ: ‘ದೇವಾಲಯಗಳು ಸರ್ವಧರ್ಮೀಯರಲ್ಲೂ ಸಾಮರಸ್ಯ ಮೂಡಿಸಿ ಸಕಾರಾತ್ಮಕ ಭಾವನೆ ಮೂಡಿಸುವ ಮೂಲಕ ಜನರಲ್ಲಿ ನೆಮ್ಮದಿ ಉಂಟಾಗಲು ಸಹಕಾರಿ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಇರಿಗೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ₹ 2 ಲಕ್ಷದ ಚೆಕ್ ನೀಡಿ ಅವರು ಮಾತನಾಡಿದರು.

‘ಯುವಜನರಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ, ಗುರುಹಿರಿಯರಲ್ಲಿ ಗೌರವ ಭಾವನೆ ಮೂಡಬೇಕಾದರೆ ಅವರಲ್ಲಿನ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕಿರುವ ಅನಿವಾರ್ಯತೆ ಇದೆ. ಹಳ್ಳಿಗಳಲ್ಲಿ ದೇವಾಲಯ ನಿರ್ಮಾಣ ಮಾಡುವ ಮೂಲಕ ಇಂತಹ ಕಾರ್ಯಕ್ರಮಗಳಿಗೆ ಮುಂದಾಗಬೇಕು. ಕ್ಷೇತ್ರದಲ್ಲಿ ಅನೇಕ ದೇವಾಲಯಗಳ ಅಭಿವೃದ್ಧಿ ಮತ್ತು ನಿರ್ಮಾಣಕ್ಕೆ ಚುನಾವಣೆಯ ಪೂರ್ವದಿಂದಲೂ ಸಹಕಾರ ನೀಡಿದ್ದೇನೆ. ಈಗಲೂ ನೀಡುತ್ತಿದ್ದೇನೆ. ಜನರ ಸಹಭಾಗಿತ್ವ ಇದ್ದಾಗ ಮಾತ್ರ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ’ ಎಂದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಸಮಾಜದಲ್ಲಿ ಏನನ್ನು ಗಳಿಸಿದ್ದೇವೆಯೋ ಅದೆಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಸಮಾಜದ ಏಳಿಗೆಗಾಗಿ ಏನು ಮಾಡಿದ್ದೇವೆ ಅದು ಮಾತ್ರ ನಮಗೆ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರೋಪಕಾರ, ನ್ಯಾಯ, ಧರ್ಮ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಬದುಕಬೇಕು’ ಎಂದರು.

‘ಈಚೆಗೆ ಯುವ ಸಮೂಹ ಹಾದಿ ತಪ್ಪುತ್ತಿದ್ದು ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದರು.

ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಕೋರಮಂಗಲ ವೀರಪ್ಪ, ಗ್ರಾಮದ ಮುಖಂಡರಾದ ಭೈಯಣ್ಣ, ಮುನಿಕೃಷ್ಣಪ್ಪ, ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.