ADVERTISEMENT

ಧರ್ಮ ಸಂಸ್ಥೆಗಳು ಉಳಿಯಬೇಕು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 14:24 IST
Last Updated 17 ಮಾರ್ಚ್ 2019, 14:24 IST
ವಿಜಯಪುರ ಅಯೋಧ್ಯಾ ನಗರ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನ ಮಠದ ಧರ್ಮ ಸಂಸ್ಥೆಯ ಆವರಣದಲ್ಲಿ ಗದ್ದುಗೆ ನವೀಕರಣ ಮತ್ತು ಗಣಶಾಂತಿ ಹೋಮದ ಅಂಗವಾಗಿ ಶಿವಗಂಗಾ ಕ್ಷೇತ್ರದ ಪಟ್ಟದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಅವರನ್ನು ಅಭಿನಂದಿಸಿದರು
ವಿಜಯಪುರ ಅಯೋಧ್ಯಾ ನಗರ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನ ಮಠದ ಧರ್ಮ ಸಂಸ್ಥೆಯ ಆವರಣದಲ್ಲಿ ಗದ್ದುಗೆ ನವೀಕರಣ ಮತ್ತು ಗಣಶಾಂತಿ ಹೋಮದ ಅಂಗವಾಗಿ ಶಿವಗಂಗಾ ಕ್ಷೇತ್ರದ ಪಟ್ಟದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಅವರನ್ನು ಅಭಿನಂದಿಸಿದರು   

ವಿಜಯಪುರ: ಧರ್ಮ ಸಂಸ್ಥೆಗಳು ಉಳಿದಾಗ ಮಾತ್ರ ಜನರಲ್ಲಿ ಸಂಸ್ಕಾರ ಉಳಿಯಲು ಸಾಧ್ಯ ಎಂದು ಶಿವಗಂಗಾ ಕ್ಷೇತ್ರದ ಪಟ್ಟದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.

ಇಲ್ಲಿನ ಮಹಂತಿನಮಠದಲ್ಲಿ ಭಾನುವಾರ ಅಯೋಧ್ಯಾ ನಗರ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನ ಮಠದ ಧರ್ಮ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಗದ್ದುಗೆಯ ನವೀಕರಣ ಮತ್ತು ಗಣಶಾಂತಿ ಹೋಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮ ಉಳಿದರೆ ನಾವು ಉಳಿಯುತ್ತೇವೆ. ಮಹಂತಿನಮಠದಂತಹ ಧಾರ್ಮಿಕ ಕೇಂದ್ರಗಳಿಂದಲೂ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ಇಂತಹ ಮಠಗಳು ಸಮಾಜದಲ್ಲಿ ಸಾಕಷ್ಟು ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ ಎಂದರು.

ADVERTISEMENT

ಗಣಪತಿ ಹೋಮ, ಮೃತ್ಯಂಜಯ ಹೋಮ, ನವಗ್ರಹ ಹೋಮ ಮತ್ತು ಶಾಂತಿಹೋಮ, ವಾಸ್ತು ಹೋಮಗಳನ್ನು ನೆರವೇರಿಸಲಾಯಿತು. ನಗರೇಶ್ವರಸ್ವಾಮಿ ದೇವಾಲಯದಿಂದ ಮಂಗಳ ಕಳಸದೊಂದಿಗೆ ಹರಿಹರ ಮತ್ತು ರುದ್ರದೇವರ ಉತ್ಸವ ಮೂರ್ತಿಗಳನ್ನು ಮಹಂತಿನಮಠಕ್ಕೆ ತರಲಾಯಿತು.

ಮುಖಂಡರಾದ ಬಿ.ಪ್ರಭುದೇವ್, ವಿ.ವಿಶ್ವನಾಥ್, ಚಂಪಕವಲ್ಲಿ, ಎನ್.ರುದ್ರಮೂರ್ತಿ, ಬಿ.ಕೆ.ದಿನೇಶ್, ಪಿ.ಮುರಳೀಧರ್, ಸಿ.ವಿಜಯರಾಜ್, ಸಿ.ಮಂಜುನಾಥ್, ಸುರೇಶ್‌ಬಾಬು, ಶೀಲಾರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.