ADVERTISEMENT

‘ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ’

ಕಾರ್ಮಿಕರ ಸನದು ಪುಸ್ತಕ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 13:52 IST
Last Updated 7 ಏಪ್ರಿಲ್ 2019, 13:52 IST
ಕಾರ್ಮಿಕರ ಸನದು ಪುಸ್ತಕವನ್ನು ಜೆಸಿಟಿಯು ರಾಜ್ಯ ಮುಖಂಡ ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು
ಕಾರ್ಮಿಕರ ಸನದು ಪುಸ್ತಕವನ್ನು ಜೆಸಿಟಿಯು ರಾಜ್ಯ ಮುಖಂಡ ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು   

ದೊಡ್ಡಬಳ್ಳಾಪುರ:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕರ ಪರ ನೀತಿಗಳ ಬದಲಾವಣೆ ಕುರಿತಾಗಿ ಗಮನ ಸೆಳೆಯಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹೊರತಂದಿರುವ ಕಾರ್ಮಿಕರ ಸನದು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ನಡೆಯಿತು.

ಜೆಸಿಟಿಯು ರಾಜ್ಯ ಮುಖಂಡ ಪ್ರತಾಪ್‌ ಸಿಂಹ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ,ಕಾರ್ಮಿಕರು ಹಾಗೂ ರೈತರು ದೇಶದ ಸಂಪತ್ತನ್ನು ಸೃಷ್ಟಿಸುತ್ತಿರುವುದು ಸರಿಯಷ್ಟೆ. ಆದರೆ, ಕೇಂದ್ರ ಸರ್ಕಾರ ಈ ಜನರ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ಈ ದಿಸೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ, ಉದ್ಯೋಗವಕಾಶಗಳ ಹೆಚ್ಚಳ, ಗುತ್ತಿಗೆ ಪದ್ಧತಿ ನಿಲ್ಲಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ನೂತನ ಪಿಂಚಣಿ ಯೋಜನೆ ರದ್ದು ಕಾರ್ಮಿಕಪರ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿಯೂ ಕಾರ್ಮಿಕರಿಗೆ ಹಲವಾರು ಸಮಸ್ಯೆಗಳಿವೆ. ಇಎಸ್‍ಐ ಆಸ್ಪತ್ರೆಗೆ ಶಂಕುಸ್ಥಾಪನೆ ಆಗಿದ್ದರೂ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕರಿಗೆ ಕೆಲಸದ ಭದ್ರತೆಯಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಲಾಗುವುದು ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಅಂಗನವಾಡಿ ನೌಕರರ ಸಂಘದ ನಳಿನಾಕ್ಷಿ, ಕಾರ್ಮಿಕ ಮುಖಂಡರಾದ ಬಾಬಾ ಜಾನ್, ಕೆ.ರಘುಕುಮಾರ್, ಆದಿನಾರಾಯಣ ರೆಡ್ಡಿ, ರಾಜಘಟ್ಟ ಮಹೇಶ್, ಶಿವಾರೆಡ್ಡಿ, ಭರತ್‌ ಬೋಸ್ಲೆ, ಶೇಖ್ ಮುಸ್ತಾಫಾ, ಇನಾಯತ್, ಕೆಂಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.