ADVERTISEMENT

ನಿಧಿ ಹುಡುಕಲು ಹೋಗಿ ಪ್ರಾಣತೆತ್ತ ಯುವಕ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 4:10 IST
Last Updated 8 ಆಗಸ್ಟ್ 2020, 4:10 IST
ಆನೇಕಲ್ ತಾಲ್ಲೂಕಿ ಜಿಗಣಿ ಪುರಸಭೆಯ ನಾಮನಿರ್ದೇಶಕರಾಗಿ ನೇಮಕಗೊಂಡ ಸದಸ್ಯರನ್ನು ಶಾಸಕ ಎಂ.ಕೃಷ್ಣಪ್ಪ ಅಭಿನಂದಿಸಿದರು
ಆನೇಕಲ್ ತಾಲ್ಲೂಕಿ ಜಿಗಣಿ ಪುರಸಭೆಯ ನಾಮನಿರ್ದೇಶಕರಾಗಿ ನೇಮಕಗೊಂಡ ಸದಸ್ಯರನ್ನು ಶಾಸಕ ಎಂ.ಕೃಷ್ಣಪ್ಪ ಅಭಿನಂದಿಸಿದರು   

ಹೊಸಕೋಟೆ: ಪುರಾತನ ದೇವಾಲಯದಲ್ಲಿ ನಿಧಿ ಹುಡುಕಲು ಹೋದವನ ಮೇಲೆ ದೇವಾಲಯದ ಮಂಟಪ ಕುಸಿದು ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ600 ವರ್ಷದ ಹಳೆಯದಾದ ಸರೋವರ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಘಟನೆ ನಡೆದಿದೆ. ಒಟ್ಟು 9 ಜನರ ತಂಡ ದೇವಾಲಯದಲ್ಲಿ ನಿಧಿಯನ್ನು ಹುಡುಕುವ ಪ್ರಯತ್ನಕ್ಕೆ ತೊಡಗಿದ್ದಾಗ ಈ ಘಟನೆ ನಡೆದಿದೆ. ಹಿಂಡಗನಾಳದ ಸುರೇಶ್(23) ಎಂಬುವ ವ್ಯಕ್ತಿಯ ಮೇಲೆ ಮಂಟಪ ಕುಸಿದಿದೆ. ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಉಳಿದ ಮೂರು ಜನರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಟಪ ಕುಸಿದಾಗ ಜೊತೆದಿದ್ದವರು 108 ಅಂಬುಲೆನ್ಸ್‌ಗೆ ಕರೆಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆಂಬುಲೆನ್ಸ್ ಚಾಲಕ ಪರಿಸ್ಥಿತಿಯನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಅಗ್ನಿಶಾಮಕ ದಳದವರ ಸಹಾಯದಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಂಬಳಗಾನಹಳ್ಳಿಯ ಶ್ರೀನಿವಾಸ ಹಾಗು ಮಂಜುನಾಥ್, ಯಲಹಂಕದ ಸಬಾಸಿನ್ ಎಂಬುವವರನ್ನು ರಕ್ಷಿಸಿ ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲಾಗಿಸಿರುವುದಾಗಿ ನಂದಗುಡಿ ಪೊಲೀಸರು ತಿಳಿಸಿದ್ದಾರೆ. ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.