ADVERTISEMENT

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 4:18 IST
Last Updated 17 ಡಿಸೆಂಬರ್ 2025, 4:18 IST
   

ಸೂಲಿಬೆಲೆ(ಹೊಸಕೋಟೆ): ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಸಹಾಯಾದ ಹಸ್ತಬೇಕಿದೆ. ಬಾಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕಲಿಕೆಯಲ್ಲಿ ಮುಂದಿರುವ ಬಡ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಪರಿಗ್ರಹ ಟ್ರಸ್ಟ್ ಭರಿಸಲಿದೆ ಎಂದು ಬೆಂಗಳೂರಿನ ಪರಿಗ್ರಹ ಟ್ರಸ್ಟ್ ಸಂಸ್ಥಾಪಕ ಸುನಿಲ್ ಕುಮಾರ್ ತಿಳಿಸಿದರು.

ಹೋಬಳಿಯ ಬಾಲೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಟ್ರ್ಯಾಕ್‌ಸೂಟ್ ಮತ್ತು ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.

‘ನಾವೆಲ್ಲ ಇಂದು ಲಕ್ಷ ಲಕ್ಷ ವೇತನ ಪಡೆಯುತ್ತಿದ್ದೇವೆ ಎಂದರೆ ಅದಕ್ಕೆ ಸರ್ಕಾರಿ ಶಾಲೆಗಳಲ್ಲಿ ನಮಗೆ ಸಿಕ್ಕ ಮೌಲ್ಯಗಳ ಬುನಾದಿಯೇ ಕಾರಣ. ಇಂದಿಗೂ ಅಂಕಿ ಸಂಖ್ಯೆಗಳನ್ನು ತೆಗೆದು ನೋಡಿ ದೇಶದಲ್ಲಿ ಬಹುತೇಕ ಉದ್ಯೋಗಿಗಳು ಸರ್ಕಾರಿ ಶಾಲೆಯಲ್ಲಿ ಓದಿರುವವರೇ ಇದ್ದಾರೆ’ ಎಂದರು.

ADVERTISEMENT

ಶಿಕ್ಷಕರ ಮನವಿಗೆ ಸ್ಪಂದಿಸಿ ನಲಿ ಕಲಿ ಟೇಬಲ್ ಮತ್ತು ಕುರ್ಚಿ ಖರೀದಿಗೆ ತಗುಲುವ ವೆಚ್ಚ ಭರಿಸುವುದಾಗಿಯೂ, ಪ್ರತಿ ವರ್ಷ ಇನ್ನೂ ಮುಂದೆ ಮಕ್ಕಳ ಕಲಿಕೆಗೆ ಪೂರಕವಾದ ಕಲಿಕಾ ಪರಿಕರ ನೀಡುವುದಾಗಿ ಭರವಸೆ ನೀಡಿದರು.

ಬಾಲೇನಹಳ್ಳಿ ಗ್ರಾಮದ ಉಪನ್ಯಾಸಕ ಡಾ.ಚನ್ನಕೃಷ್ಣಪ್ಪ ಮಾತನಾಡಿದರು. ಎಸ್‌ಡಿಎಂಸಿ ಸದಸ್ಯರಾದ ಸುರೇಶ್, ಪರಿಗ್ರಹ ಟ್ರಸ್ಟ್ ಕಾರ್ಯದರ್ಶಿ ಗುರುಮಲ್ಲೇಶ್, ಪದಾಧಿಕಾರಿಗಳಾದ ಅಶೋಕ್, ವಿನೋದ್ ಕುಮಾರ್, ಮುಖ್ಯ ಶಿಕ್ಷಕರಾದ ವೆಂಕಟೇಶ್, ಶಿಕ್ಷಕಿ ಸೌಭಾಗ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.