ADVERTISEMENT

‘ಸಾಹಿತ್ಯ ಸಮ್ಮೇಳನ: ಏಕಪಕ್ಷೀಯ ನಿರ್ಧಾರವಲ್ಲ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:07 IST
Last Updated 20 ಜುಲೈ 2019, 19:07 IST

ದಾಬಸ್ ಪೇಟೆ: ‘ಜಿಲ್ಲಾ ಸಾಹಿತ್ಯ ಪರಿಷತ್ತಿನ ಬೈಲಾ ಪ್ರಕಾರ ತಾಲ್ಲೂಕು ಪರಿಷತ್ತಿನ ಪದಾಧಿಕಾರಿಗಳು ಸಭೆ ನಡೆಸಿ ಸಮ್ಮೇಳನಾಧ್ಯಕ್ಷರು, ಸ್ಥಳ ಹಾಗೂ ದಿನಾಂಕವನ್ನು ಆಯ್ಕೆ ಮಾಡಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಇಲ್ಲಿ ಸ್ವಹಿತಾಸಕ್ತಿ ಅಥವಾ ಏಕಪಕ್ಷೀಯ ನಿರ್ಧಾರವಾಗಲಿ ಇಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವ, ಸಾಹಿತ್ಯದ ಬಗ್ಗೆ ಒಲವು ಹೊಂದಿರುವ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಇಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ. ತ್ಯಾಮಗೊಂಡ್ಲು, ವನಕಲ್ಲು ಮಠದಲ್ಲಿ ಎರಡು ಸಮ್ಮೇಳನಗಳನ್ನು ನಡೆಸಿದ್ದು, ಶಿವಗಂಗೆಯಲ್ಲಿ ಮೂರನೇ ಸಮ್ಮೇಳನ ಮಾಡಲಾಗುತ್ತಿದೆ. ಇದಲ್ಲದೇ ತಾಲ್ಲೂಕು ಘಟಕದ ವತಿಯಿಂದ ನೆಲಮಂಗಲದಲ್ಲಿ ಪ್ರತಿಭಾ ಪುರಸ್ಕಾರ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿದ ನಂತರವೇ ಎಲ್ಲಾ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಅವಧಿಯಲ್ಲಿ ಸಂಘಟನೆಗೆ ಒತ್ತು ನೀಡಿದ್ದೇವೆ. 500 ನೂತನ ಸದಸ್ಯರನ್ನು ಪರಿಷತ್‌ಗೆ ನೋಂದಣಿ ಮಾಡಿದ್ದೇವೆ’ ಎಂದು ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಗಂಗರಾಜು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.