ADVERTISEMENT

ಪ್ಲಾಸ್ಟಿಕ್‌ ಪ್ಯಾಡ್‌ನಿಂದ ದೀರ್ಘಕಾಲದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:07 IST
Last Updated 29 ಡಿಸೆಂಬರ್ 2025, 5:07 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಗಾರಡಿಗರಪಾಳ್ಯದ ಮಹಿಳೆಯರಿಗೆ ಮುಟ್ಟಿನ ಬಗ್ಗೆ ಸ್ತ್ರೀರೋಗ ತಜ್ಞೆ,ಲೇಖಕಿ ಡಾ.ಇಂದಿರಾ ಮಾಹಿತಿ ನೀಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಗಾರಡಿಗರಪಾಳ್ಯದ ಮಹಿಳೆಯರಿಗೆ ಮುಟ್ಟಿನ ಬಗ್ಗೆ ಸ್ತ್ರೀರೋಗ ತಜ್ಞೆ,ಲೇಖಕಿ ಡಾ.ಇಂದಿರಾ ಮಾಹಿತಿ ನೀಡಿದರು   

ಮಧುರೆ(ದೊಡ್ಡಬಳ್ಳಾಪುರ): ಪ್ಲಾಸ್ಟಿಕ್ ಅಂಶಗಳಿರುವ ಸ್ಯಾನಿಟರಿ ಪ್ಯಾಡ್‌ಗಳ ದೀರ್ಘಕಾಲದ ಬಳಕೆಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎಂದು ಸ್ತ್ರೀರೋಗ ತಜ್ಞೆ, ಲೇಖಕಿ ಡಾ.ಇಂದಿರಾ ಹೇಳಿದರು.

ತಾಲ್ಲೂಕಿನ ಗಾರಡಿಗರಪಾಳ್ಯದ ಗುಂಡುತೋಪು ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಭಾನುವಾರ ನಡೆದ ‘ಋತುಚಕ್ರದ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳಲು ಮುಟ್ಟಿನ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.

ಶ್ಯಾಮು ಹೆಲ್ತ್ ಕೇರ್ ಸೆಂಟರ್, ಯುವ ಸಂಚಲನ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಚಿತವಾಗಿ ಮೈಕ್ರೋ ಫೈಬರ್ ಬಟ್ಟೆ ಪ್ಯಾಡ್ ವಿತರಣೆ ಮಾಡಲಾಯಿತು.  

ADVERTISEMENT

ಮಹಿಳೆಯರಿಗೆ ದೇಹದ ಸ್ವಾಭಾವಿಕ ಪ್ರಕ್ರಿಯೆಗಳ ಅರಿವಿನ ಕೊರತೆ ಇದೆ. ಪ್ಯಾಡ್‌ ಅಥವಾ ಬಳಸಿದ ಬಟ್ಟೆ ಸುಡಬಾರದು. ಪ್ರತಿ ಆರು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸುವುದು ಅವಶ್ಯ. ಮುಟ್ಟಿನ ಕಪ್ ಮತ್ತು ಪಿರಿಯಡ್ ಪ್ಯಾಂಟಿ ಮುಂತಾದವನ್ನು ಸ್ವಚ್ಛತೆಯೊಂದಿಗೆ  ಬಳಸಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿದರು. ಚನ್ನದೇವಿ ಅಗ್ರಹಾರ ಗ್ರಾ.ಪಂ ಸದಸ್ಯೆ ಕಾಂತಲಕ್ಷ್ಮಿ, ಗಿರೀಶ್, ಲಾವಣ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.