ADVERTISEMENT

ದೊಡ್ಡಹುಲ್ಲೂರು | ಸಂಕ್ರಾಂತಿ ಹಬ್ಬ: ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 6:14 IST
Last Updated 16 ಜನವರಿ 2026, 6:14 IST
ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮದಲ್ಲಿ ಮುತ್ಯಾಲಮ್ಮ ದೇವಿ ಯುವಕರ ಬಳಗ ಹಾಗೂ ಯಲ್ಲಮ್ಮ ದೇವಿ ಯುವಕರ ಬಳಗ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ವಾಲಿಬಾಲ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಿದ ಸಂದರ್ಭ
ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮದಲ್ಲಿ ಮುತ್ಯಾಲಮ್ಮ ದೇವಿ ಯುವಕರ ಬಳಗ ಹಾಗೂ ಯಲ್ಲಮ್ಮ ದೇವಿ ಯುವಕರ ಬಳಗ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ವಾಲಿಬಾಲ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಿದ ಸಂದರ್ಭ   

ದೊಡ್ಡಹುಲ್ಲೂರು(ಹೊಸಕೋಟೆ): ಮುತ್ಯಾಲಮ್ಮ ದೇವಿ ಯುವಕರ ಬಳಗ ಹಾಗೂ ಯಲ್ಲಮ್ಮ ದೇವಿ ಯುವಕರ ಬಳಗ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎರಡು ದಿನಗಳ ವಾಲಿಬಾಲ್ ಕಪ್ ಪಂದ್ಯಾವಳಿಗೆ ಆಯೋಜಕರಾದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹುಲ್ಲೂರು ಸಿ.ಮಂಜುನಾಥ್ ಚಾಲನೆ ನೀಡಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ನಾನಾ ಭಾಗಗಳಿಂದ 20-25 ತಂಡಗಳು ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ. ಆದರೆ, ಕ್ರೀಡೆಯಲ್ಲಿ ಭಾಗವಹಿಸುವುದು ಕ್ರೀಡಾ ಸ್ಫೂರ್ತಿಗೆ ಮೆರುಗು ತಂದಂತೆ. ಕ್ರೀಡೆ ಎಂಬುದು ಮನುಷ್ಯನ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಯಾವುದೇ ಕ್ರೀಡೆಯಲ್ಲೇ ಆಗಲಿ ಭಾಗವಹಿಸಿದ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸೋಲು–ಗೆಲುವಿನ ಮೆಟ್ಟಿಲು ಎಂದು ಸ್ವೀಕರಿಸಿ ಎಂದರು.

ಕ್ರೀಡೆಯಲ್ಲಿ ವಿಜೇತರು : ಮೊದಲನೇ ಬಹುಮಾನ ₹50 ಸಾವಿರ ಹಾಗೂ ಟ್ರೋಫಿ, ಎರಡನೇ ಬಹುಮಾನ ₹30 ಸಾವಿರ, ಮೂರನೇ ಬಹುಮಾನ ₹20 ಸಾವಿರ ಹಾಗೂ ನಾಲ್ಕನೇ ಬಹುಮಾನ ₹10 ಸಾವಿರ ವಿತರಣೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಹುಲ್ಲೂರು ಕಿರಣ್ ಕುಮಾರ್, ಗ್ರಾ.ಪಂ ಅಧ್ಯಕ್ಷ ನೀಲಾಂಜಿನಪ್ಪ, ಮುಖಂಡರಾದ ಡಿ.ಎಲ್.ಮಂಜುನಾಥ್, ಕುಮಾರಣ್ಣ ಹಾಗೂ ಗ್ರಾಮದ ಮುಖಂಡರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.