
ಹೊಸಕೋಟೆ: ನಗರದ ಅಂಬೇಡ್ಕರ್ ಭವನದಲ್ಲಿ ಎಪಿಜೆ ಅಬ್ದುಲ್ ಕಲಾಂ ಪಬ್ಲಿಕ್ ಶಾಲೆ ವಾರ್ಷಿಕೊತ್ಸವ ಮತ್ತು ಸಾಧಕರಿಗೆ ಡಾ.ಕಲಾಂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈಚೆಗೆ ನಡೆಯಿತು.
ದಲಿತ ಮತ್ತು ಅಲ್ಪಸಂಖ್ಯಾತ ಹಕ್ಕು ಹೋರಾಟಗಾರ ಎ.ಜೆ. ಖಾನ್, ರಾಷ್ಟ್ರೀಯ ಕುಸ್ತಿಪಟು ಸೈಯ್ಯದ್ ಯುಸೆಫ್, ಶಿಕ್ಷಣ ಚಿಂತಕ ಆಯೇಷಾ ರಹಮತ್, ಕಾರ್ಮಿಕ ಹಕ್ಕು ಹೋರಾಟಗಾರ ಎಚ್.ಎನ್. ಮೋಹನ್ ಬಾಬು ಅವರಿಗೆ ಡಾ ಕಲಾಂ ಪ್ರಶಸ್ತಿ ನೀಡಲಾಯಿತು.
ಅಖಿಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಹರಿಂದ್ರ ಮಾತನಾಡಿ, ಮುಸ್ಲಿಂ ಮಹಿಳೆಯರು ಸಮಾಜದಲ್ಲಿ ಮುಕ್ತವಾಗಿ ವ್ಯವಹಾರಗಳಲ್ಲಿ ಪಾಲ್ಗೊಳ್ಳಬೇಕು. ಬಾನುಮುಸ್ತಾಕ್ ಅವರಂತೆ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೋಷಕರ ಪ್ರೀತಿ ಸಿಗದೆ ಮಕ್ಕಳು ಒಂಟಿಯಾಗಿ ಇರಲಾಗದೆ ಮೊಬೈಲ್ ಮೊರೆಹೋಗಿ ವ್ಯಸನಿಗಳಾಗಿ ಬದಲಾಗುತ್ತಿದ್ದಾರೆ. ಈಗಲೇ ಪೋಷಕರು ಎಚ್ಚೆತ್ತು ಮಕ್ಕಳಿ ಸಮಯ ಕೊಡಿ, ಮುಕ್ತವಾಗಿ ಮಾತನಾಡಿ, ಪ್ರೀತಿ, ವಾತ್ಸಲದಿಂದ ಮಾತನಾಡಿ, ಅವರ ಪ್ರತಿಭೆ ಪ್ರೋತ್ಸಾಹಿಸಿ ಎಂದು ನೊಬೆಲ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ರಾಬಿಯ ಮುರಾಮತ್ ಹೇಳಿದರು.
ಮಕ್ಕಳು ಗಾಂಧಿ, ನೇತಾಜಿ, ಭಗತ್ ಸಿಂಗ್, ರವೀಂಧ್ರನಾಥ್ ಠಾಗೂರ್, ನೆಹರು ಸೇರಿದಂತೆ ಮಹನೀಯರ ವೇಷ ಭೂಷಣದಲ್ಲಿ ಗಮನ ಸೆಳೆದರು.
ಅಬ್ದುಲ್ ಕಲಾಂ ಶಾಲೆ ಸಂಸ್ಥಾಪಕ ಸಮೀರ್ ಅಸದ್, ಶಾಲೆಯ ಮುಖ್ಯ ಶಿಕ್ಷಕಿ ಅಮ್ರಿನ್ ತಾಬ್ಸುಮ್, ಕಸಾಪ ನಿಕಟಪೂರ್ವ ಕಾರ್ಯದರ್ಶಿ ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.