ADVERTISEMENT

ವೈಜ್ಞಾನಿಕ ಆವಿಷ್ಕಾರ; ಪ್ರಗತಿಗೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 12:58 IST
Last Updated 18 ಡಿಸೆಂಬರ್ 2019, 12:58 IST
ಹೊಸಕೋಟೆ ತಾಲ್ಲೂಕಿನ ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು
ಹೊಸಕೋಟೆ ತಾಲ್ಲೂಕಿನ ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು   

ಸೂಲಿಬೆಲೆ: ವಿದ್ಯಾರ್ಥಿ ಸಮುದಾಯ ವೈಜ್ಞಾನಿಕ ಕ್ಷೇತ್ರದ ಜ್ಞಾನವನ್ನು ಪಡೆದುಕೊಂಡಾಗ, ವಿಜ್ಞಾನದ ಆಸಕ್ತಿ ಹಾಗೂ ಜ್ಞಾನದ ವೃದ್ಧಿಯಾಗುತ್ತದೆ, ಇದರಿಂದ ವಿಜ್ಞಾನ ಕ್ಷೇತ್ರದ ಬೆಳವಣೆಗೆಗೆ ಹಾಗೂ ಅವಿಷ್ಕಾರಗಳ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದು ಬೇಗೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ಎನ್.ಮಹೇಶ್ ಹೇಳಿದರು.

ಹೊಸಕೋಟೆ ತಾಲ್ಲೂಕಿನ ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ಪ್ರತಿ ವಿದ್ಯಾರ್ಥಿಯಲ್ಲೂ ಅವರದೇ ಬುದ್ಧಿಶಕ್ತಿಯಿದೆ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಪಡಿಸಿಕೊಳ್ಳಬೇಕು. ಹಾಗೂ ಸಮಾಜಕ್ಕೆ ಕೊಡುಗೆ ನೀಡಿ ದೇಶದ ಉತ್ತಮ ಪ್ರಜೆಯಾಗಿ ಬದುಕಬೇಕು’ ಎಂದರು.

ADVERTISEMENT

‘ಬೇಗೂರು ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಜತೆಗೆ ಮೂಲ ಸೌಲಭ್ಯಗಳಾದ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಶಿಕ್ಷಣಕ್ಕೆ ಪೂರಕವಾದ ಪರಿಸರವನ್ನು ಅಪ್ಸಾ ಸಂಸ್ಥೆಯವರು ನಿರ್ಮಿಸಿಕೊಟ್ಟದ್ದಾರೆ’ ಎಂದರು.

ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಪ್ರಗತಿಗೆ ಅಪ್ಸಾ ಸಂಸ್ಥೆ, ಪ್ಲಾನ್ ಇಂಟರ್ ನ್ಯಾಷನಲ್, ದಿಶಾ ಉಡಾನ್ ಹಾಗೂ ಅಕ್ಸೋನೊಬೆಲ್ ಕಂಪನಿ ಸಹಯೋಗದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಅಪ್ಸಾ ಸಂಸ್ಥೆ ಸಂಚಾಲಕ ದೇವರಾಜ್ ಮಾತನಾಡಿ, ‘ಅಪ್ಸಾ ಸಂಸ್ಥೆಯವರು, ಅಕ್ಸೋನೊಬೆಲ್ ಕಂಪನಿಯ ಸಹಕಾರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸುಧಾರಣೆಯ ಜತೆಗೆ, ಕಲಿಕೆ ಮತ್ತು ಪ್ರಯೋಗಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಜ್ಞಾನ ಮತ್ತು ಗಣೆತ ವಿಷಯಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವ ಕಾರ್ಯಕ್ರಮವಾಗಿದೆ’ ಎಂದರು.

ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ 15 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನೆಪಿನ ಕಾಣಿಕೆಯನ್ನು ಅಪ್ಸಾ ಸಂಸ್ಥೆ ವತಿಯಿಂದ ನೀಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಲಕ್ಷ್ಮಣ್, ಸಹ ಶಿಕ್ಷಕರಾದ ವನಿತಾ, ನಾಗರಾಜ್, ರಾಜೇಶ್ ಹಾಗೂ ಅಪ್ಸಾ ಸಂಸ್ಥೆಯ ಭಾಗ್ಯಮ್ಮ, ತುಳಸಿಬಾಯಿ, ಪೂರ್ಣೇಮಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.