
ಪ್ರಜಾವಾಣಿ ವಾರ್ತೆ
ದೇವನಹಳ್ಳಿ: ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕಿನ ಕಸಬಾ ಹೋಬಳಿಯ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಫೆ. 11ರಂದು ಬೆಳಿಗ್ಗೆ 11 ಗಂಟೆಗೆ ಬೆಣ್ಣೆಹಣ್ಣು ಮತ್ತು ಮೆಕಡೇಮಿಯ ಹಣ್ಣಿನ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತು ರೈತರಿಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ವಿಷಯ ತಜ್ಞರಾಗಿ ನಿವೃತ್ತ ತೋಟಗಾರಿಕೆ ಹೆಚ್ಚುವರಿ ನಿರ್ದೇಶಕ ಡಾ. ಹಿತ್ತಲಮನಿ ಎಸ್.ವಿ ಭಾಗವಹಿಸಿ ವೈಜ್ಞಾನಿಕ ಬೇಸಾಯದ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.