ADVERTISEMENT

ದೇವನಹಳ್ಳಿ| ಸೋಂಕು ದೃಢ ಪಟ್ಟಿಲ್ಲ: ಆತಂಕ ಬೇಡ 

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:52 IST
Last Updated 9 ಮೇ 2020, 9:52 IST
ಮಲದ ರಾಡಿ ಚರಂಡಿಗೆ ಹರಿದು ಬರುತ್ತಿರುವುದು.
ಮಲದ ರಾಡಿ ಚರಂಡಿಗೆ ಹರಿದು ಬರುತ್ತಿರುವುದು.   

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆ ದೇವನಹಳ್ಳಿನಗರದಿಂದ ಬೆಂಗಳೂರು ನಗರಕ್ಕೆ ಕಳುಹಿಸಲಾದ ಮಾಲೂರಿನ 17 ಜನರ ತಂಡದಲ್ಲಿ ಈವರೆಗೆ ಕೊರೊನಾ ಸೋಂಕು ಧೃಡಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎಸ್.ರವೀಂದ್ರ ತಿಳಿಸಿದರು.

ದೇವನಹಳ್ಳಿ ನಗರದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಇಡಿ ನಗರದಲ್ಲಿ ಓಡಾಡಿದ್ದಾರೆ ಹೊಟೆಲ್‌ ಇತರೆಡೆ ತಿರುಗಾಡಿದ್ದಾರೆ. ಇಬ್ಬರಿಗೆ ಸೋಂಕು ಖಚಿತ ಪಟ್ಟಿದೆ ಎಂದು ಸಂದೇಶ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂಬ ವದಂತಿಗೆ ಸ್ಪಷ್ಠನೆ ನೀಡಿದ ಅವರು, ಮಾಲೂರಿನಿಂದ ಬಂದಿರುವ ಸುದ್ದಿ ಖಚಿತವಾಗಿತ್ತು. ನಂತರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬೆಂಗಳೂರು ನಗರಕ್ಕೆ ಶಂಕಿತ 17 ಜನರನ್ನು ಕಳುಹಿಸಿದ್ದರು. ಈ ಪೈಕಿ ಒಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಉಳಿದ 16 ಜನರು ಬೆಂಗಳೂರಿನ ಹಜ್ ಭವನವೊಂದರಲ್ಲಿ ಕ್ವಾರಂಟೇನ್‌ಗೆ ಒಳಗಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು. ಗುಜರಾತ್‌ನಿಂದ ಮಾಲೂರಿಗೆ ಬರುತ್ತಿದ 17 ಜನರ ತಂಡ ಕೋಲಾರ ಜಿಲ್ಲೆಯ ಪ್ರವೇಶವನ್ನು ಸ್ಥಳೀಯರು ನಿರಾಕರಿಸಿದ್ದಾರೆ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ.

17 ಜನರ ತಂಡ ಸೂರತ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ತೆರಳಿದ್ದರು. ಮಾಲೂರಿನಿಂದ ದೇವನಹಳ್ಳಿ ನಗರದ ವಿಜಯಪುರ ಕ್ರಾಸ್ ಬಳಿ ಇರುವ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.