ADVERTISEMENT

ದೇವನಹಳ್ಳಿ | 'ನುಡಿಗಿಂತ ನಡೆ ಮೇಲು ಎಂದಿದ್ದ ಶಿವಶರಣರು'

ಗೊಂಬೆಮನೆಯಲ್ಲೊಂದು ಶರಣ ಸಂಜೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:42 IST
Last Updated 10 ಅಕ್ಟೋಬರ್ 2025, 1:42 IST
ವಿಜಯಪುರದಲ್ಲಿ ನಡೆದ ಶರಣಸಂಜೆ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕಿ ವಸುಂದರಮ್ಮ ಅವರನ್ನು ಸನ್ಮಾನಿಸಲಾಯಿತು
ವಿಜಯಪುರದಲ್ಲಿ ನಡೆದ ಶರಣಸಂಜೆ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕಿ ವಸುಂದರಮ್ಮ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ (ದೇವನಹಳ್ಳಿ):  ಶಿವರಶಣರು ನುಡಿಗಿಂತ ನಡೆಗ ಹೆಚ್ಚು ಮಹತ್ವ ನೀಡಿ, ನುಡಿದಂತೆ ನಡೆದಿದ್ದಾರೆ ಎಂದು ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್‌, ಸಾಕ್ಷಿ ಮುರುಗನ್ ಸೇವಾ ಟ್ರಸ್ಟ್, ವೀರಭದ್ರಸ್ವಾಮಿ ಗೋಷ್ಠಿ ಅಕ್ಕನಬಳಗ ಸೇವಾಟ್ರಸ್ಟ್, ಅರಿವಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಗೊಂಬೆಮನೆಯಲ್ಲೊಂದು ಶರಣ ಸಂಜೆ ಮತ್ತು ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಮಾಣಿಕ ಮನುಷ್ಯನೇ ಪರಮಾತ್ಮನ ಉದಾತ್ತ ಸೃಷ್ಟಿ ಎಂದು ಬಸವಾದಿ ಶಿವರಣರು ನಂಬಿದ್ದರು. ಸತ್ಯ, ಶುದ್ಧ ಕಾಯಕ ನಿಷ್ಠೆ, ಸಮಯಪ್ರಜ್ಞೆಯಂತಹ ಮೌಲ್ಯಗಳು ಶಿವಶರಣರಿಂದ ಅರಿಯಬೇಕಿದೆ ಎಂದರು.

ADVERTISEMENT

ಟ್ರಸ್ಟ್‌ ಅಧ್ಯಕ್ಷ ವಿ.ಅನಿಲ್‍ಕುಮಾರ್ ಮಾತನಾಡಿ, ಜನರಲ್ಲಿ ಹಣ, ಅಧಿಕಾರ, ಆಸ್ತಿಯ ಮೇಲಿನ ಆಸೆಯು ಹೆಚ್ಚಬಾರದು. ಸರ್ವ ಸಮಾನತೆಯ ಸಮಾಜದ ಸೃಷ್ಟಿಗೆ ವಚನಗಳು ಮಾರ್ಗ ತೋರುತ್ತವೆ ಎಂದರು.

ಕವಿ ಮ.ಸುರೇಶ್‍ಬಾಬು, ವ್ಯಕ್ತಿಯು ಸದಾ ಕಾಯಕಶೀಲನಾಗಬೇಕು. ವ್ಯಕ್ತಿಗತ ಕೇಡು, ಸಾಮೂಹಿಕ ಕೇಡನ್ನು ಕಾಯಕದಿಂದ ದೂರವಾಗಿಸಬೇಕು ಎಂದರು.

ಟ್ರಸ್ಟ್‌ ಎಸ್.ಪಿ.ಕೃಷ್ಣಾನಂದ್ ಮಾತನಾಡಿದರು. ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್, ಕವಿ ಮೂರ್ತೀಶ್ವರಯ್ಯ, ಧಾರ್ಮಿಕ ಚಿಂತಕ ಕೃಷ್ಣಪ್ಪದಾಸ, ರೋಟರಿ ಮಾಜಿ ಅಧ್ಯಕ್ಷ ಎಂ.ಶಿವಪ್ರಸಾದ್, ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್‍ಬಾಬು, ಜೀವಿತಾ ಸುಜ್ಞಾನ್, ವಿ.ಶಿವಕುಮಾರ್, ಪ್ರಾಜ್ಞ ಲಿಂಗರಾಜು, ಹನ್ಸಿಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.