ADVERTISEMENT

ದೇವನಹಳ್ಳಿ: ಪುಟ್ಟಪ್ಪನ ಗುಡಿಬೀದಿ ಕಲ್ಯಾಣಿಯಲ್ಲಿ ಶಿವಲಿಂಗ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 3:01 IST
Last Updated 22 ಡಿಸೆಂಬರ್ 2025, 3:01 IST
ದೇವನಹಳ್ಳಿ ಪಟ್ಟಣದ ಪುಟ್ಟಪ್ಪನಗುಡಿ ಬೀದಿಯಲ್ಲಿರುವ ಶ್ರೀ ಪೀತಾಂಬರ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು
ದೇವನಹಳ್ಳಿ ಪಟ್ಟಣದ ಪುಟ್ಟಪ್ಪನಗುಡಿ ಬೀದಿಯಲ್ಲಿರುವ ಶ್ರೀ ಪೀತಾಂಬರ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು   

ದೇವನಹಳ್ಳಿ: ಪಟ್ಟಣದ ಪುಟ್ಟಪ್ಪನ ಗುಡಿಬೀದಿಯಲ್ಲಿರುವ ಪೀತಾಂಬರ ಆಂಜನೇಯ ಸ್ವಾಮಿ ದೇವಾಲಯದ ಸಮೀಪದ ಪುರಾತನ ನೀರಿನ ಕಲ್ಯಾಣಿಯಲ್ಲಿ ಭಾನುವಾರ ಶಿವಲಿಂಗ ಪತ್ತೆಯಾಗಿದೆ.

ಮುಜರಾಯಿ ಇಲಾಖೆಯಿಂದ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ವೇಳೆ ನೀರಿನಿಂದ ತುಂಬಿದ್ದ ಕಲ್ಯಾಣಿಯೊಳಗೆ ಶಿವಲಿಂಗ ಕಾಣಿಸಿಕೊಂಡಿದೆ.

ಈ ಸುದ್ದಿ ಕೇಳಿದ ಭಕ್ತರು ಹಾಗೂ ಸ್ಥಳೀಯರು ಭಕ್ತಿಯಿಂದ ಬಂದು ದರ್ಶನ ಮಾಡುತ್ತಿದ್ದಾರೆ. ಮಹಿಳೆಯರು ಲಿಂಗಕ್ಕೆ ಪೂಜೆ, ಹೂವಿನ ಅಲಂಕಾರ ಮಾಡಿ ಆರತಿ ಎತ್ತಿ ಭಕ್ತಿ ಸಮರ್ಪಿಸುತ್ತಿದ್ದಾರೆ. ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ನೀರು ಉಕ್ಕಿತ್ತಿದೆ.

ADVERTISEMENT

ಈ ಶಿವಲಿಂಗ ಮತ್ತು ಕಲ್ಯಾಣಿಯನ್ನು ಸರಿಯಾಗಿ ಸಂರಕ್ಷಣೆ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.