ADVERTISEMENT

ದೊಡ್ಡಬಳ್ಳಾಪುರ: ಮಿತಿ ಮೀರಿದ ಬೀದಿನಾಯಿ ಕಾಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:50 IST
Last Updated 12 ಸೆಪ್ಟೆಂಬರ್ 2025, 2:50 IST
ದೊಡ್ಡಬಳ್ಳಾಪುರದ ಆರ್‌.ಎಲ್‌.ಜಾಲಪ್ಪ ಕಾಲೇಜಿನ ಸಮೀಪ ಬೀದಿ ನಾಯಿಗಳ ಹಿಂಡು
ದೊಡ್ಡಬಳ್ಳಾಪುರದ ಆರ್‌.ಎಲ್‌.ಜಾಲಪ್ಪ ಕಾಲೇಜಿನ ಸಮೀಪ ಬೀದಿ ನಾಯಿಗಳ ಹಿಂಡು   

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಿಯಂತ್ರಣ ಇಲ್ಲದೆ ಸಾರ್ವಜನಿಕರು ಆತಂಕದಲ್ಲಿ ಓಡಾಡುವಂತಾಗಿದೆ.

ನಗರದ ಇಸ್ಲಾಂಪುರ, ಬಸ್‌ ನಿಲ್ದಾಣದ ಸುತ್ತಮುತ್ತ, ಮುತ್ಯಾಲಮ್ಮಗುಡಿ ರಸ್ತೆ, ಎಪಿಎಂಸಿ ಮಾರುಕಟ್ಟೆ ಪ್ರದೇಶ, ತೇರಿನಬೀದಿ, ರೈಲ್ವೆ ನಿಲ್ದಾಣದ ಸುತ್ತಲಿನ ಪ್ರದೇಶ ಸೇರಿದಂತೆ ಹಲವಾರು ಕಡೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ADVERTISEMENT

ನಗರಸಭೆಯೊಂದಿಗೆ ನಗರದ ಒಂದು ಭಾಗವೇ ಆಗಿರುವ ದರ್ಗಾಜೋಗಹಳ್ಳಿ, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗಳು ಸಹ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು. ಇಲ್ಲವಾದರೆ ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣ ಕಷ್ಟವಾಗಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

‘ನಗರಸಭೆಯಿಂದ ಇತ್ತೀಚೆಗೆ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿಲ್ಲ. ಹಲವಾರು ಕಾನೂನಿಗಳ ಅಡ್ಡಿಯಿಂದಾಗಿ ನಾಯಿಗಳನ್ನು ಇಡಿದು ಬೇರೆಡೆಗೆ ಬಿಡುವಂತೆಯೂ ಇಲ್ಲ. ಈ ಎಲ್ಲಾ ಕಾರಣಗಳಿಂದ ನಗರದ ಮಾಂಸ ಮಾರಾಟ ಮಾಡುವ ಪ್ರದೇಶಗಳಲ್ಲಿ ರಾತ್ರಿ ವೇಳೆ ಇರಲಿ ಹಗಲಿನಲ್ಲೇ ಮಕ್ಕಳು, ವೃದ್ಧರು ಆತಂಕದಲ್ಲೇ ಒಡಾಡುವಂತಾಗಿದೆ’ ಎನ್ನುತ್ತಾರೆ ಇಸ್ಲಾಂಪುರ ನಿವಾಸಿ ಮಂಜುಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.