ನಂದಗುಡಿ (ಹೊಸಕೋಟೆ): ತಾಲ್ಲೂಕಿನ ಹೋಬಳಿಯ ಶಿವನಾಪುರ ಗ್ರಾಮದಲ್ಲಿರುವ ಆದಿಶಕ್ತಿ ಮಹಾಸಂಸ್ಥಾನ ಮಠದಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ದ್ರೌಪದಿ ವರ್ಧಂತಿ ಜಯಂತಿ ಈಚೆಗೆ ನಡೆಯಿತು.
ಶಿವನಾಪುರದ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪ್ರಣವಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಗುರುತಿಸಿ ಸನ್ಮಾನ ಮತ್ತು ಪ್ರಶಸ್ತಿ ನೀಡಲು ಸೀಮಿತ ಆಗಬಾರದು. ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಅವರನ್ನು ಸಿದ್ಧಗೊಳಿಸಲು ಕ್ರಮವಹಿಸಬೇಕೆಂದರು.
ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ, ಆದಿಶಕ್ತಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಸಿ.ಮುನಿಯಪ್ಪ, ಎಚ್.ಎಂ ಸುಬ್ಬರಾಜು ನಾರಾಯಣಸ್ವಾಮಿ, ಲಕ್ಕುಂಡಳ್ಳಿ ಮಂಜುನಾಥ್, ಲಯನ್ ಸಿ. ಜಯರಾಜ್, ಲಕ್ಷ್ಮಣ್, ನಾಗರಾಜು, ವಿಜಯಕುಮಾರ್, ಸೋಮನಾಥ್, ಸುನಿಲ್, ರಾಕೇಶ್, ಮುರುಳಿ, ಅಂಜನ್ ಕುಮಾರ್, ಅರುಣ್ ಕುಮಾರ್, ನಾಗರಾಜ್, ಮುನಿಯಪ್ಪ, ಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.