ADVERTISEMENT

ಮೇವು ವಿತರಣೆಗೆ ಸೂಕ್ತ ಕ್ರಮ

​ಪ್ರಜಾವಾಣಿ ವಾರ್ತೆ
Published 25 ಮೇ 2019, 13:15 IST
Last Updated 25 ಮೇ 2019, 13:15 IST
ರೈತರಿಗೆ ಮೇವು ವಿತರಿಸಿದ ಪಶು ಇಲಾಖೆ ಅಧಿಕಾರಿಗಳು
ರೈತರಿಗೆ ಮೇವು ವಿತರಿಸಿದ ಪಶು ಇಲಾಖೆ ಅಧಿಕಾರಿಗಳು   

ದೇವನಹಳ್ಳಿ: ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 61ಟನ್ ಮೇವು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ವೈದ್ಯಕೀಯ ಮತ್ತು ಪಶು ಆರೋಗ್ಯ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಾ. ಸಿ.ಎಸ್.ಅನಿಲ್ ಕುಮಾರ್ ಹೇಳಿದರು.

ಇಲ್ಲಿನ ಕಾರಹಳ್ಳಿ ಗ್ರಾಮದ ಬಳಿ ಪಶುಪಾಲಕರಿಗೆ ಮೇವು ವಿತರಿಸಿ ಮಾತನಾಡಿದ ಅವರು, ಪ್ರತಿ ಕೆ.ಜಿ ಮೇವಿಗೆ ₹2 ರೂಪಾಯಿ ನಿಗದಿ ಮಾಡಲಾಗಿದೆ. ಸ್ಥಳದಲ್ಲಿ ತೂಕ ಮಾಡಿ ವಿತರಿಸಲಾಗುತ್ತಿದೆ. ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ 208 ಪಶುಪಾಲಕರಿಗೆ 7.3 ಟನ್ ಮೇವು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರಹಳ್ಳಿ ಗ್ರಾಮದಲ್ಲಿ 10.10 ಟನ್ ಮೇವು ದಾಸ್ತಾನು ಮಾಡಿ ವಿತರಿಸಲಾಗುತ್ತಿದೆ. ಒಂದು ಹಸುವಿಗೆ 5 ಕೆ.ಜಿ ಯಂತೆ ಮೂರು ದಿನಗಳಿಗೆ ಸೀಮತಗೊಳಿಸಿ 150 ಪಶುಪಾಲಕರಿಗೆ ನೀಡಲಾಗಿದೆ. ಕೆಲವರು 2 ರಿಂದ 8 ಹಸುಗಳನ್ನು ಪಾಲನೆ ಮಾಡುತ್ತಿದ್ದಾರೆ. ಮೂರು ದಿನಗಳ ನಂತರ ಮತ್ತೆ ವಿತರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ದೇವನಹಳ್ಳಿ ನಗರದಲ್ಲಿ ನಾಲ್ಕುವರೆ ಟನ್, ನಲ್ಲೂರು ಗ್ರಾಮದ ಬಳಿ ಹತ್ತು ಟನ್, ಮಂಡಿಬೆಲೆ ಗ್ರಾಮದ ಸಮೀಪ ನಾಲ್ಕುವರೆ ಟನ್ ದಾಸ್ತಾನು ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕು ರಾಜಘಟ್ಟದಲ್ಲಿ 25ಟನ್ ದಾಸ್ತಾನು ಮಾಡಲಾಗಿದ್ದು ಮೇವು ವಿತರಣೆ ಆರಂಭಿಸಲಾಗಿದೆ ಎಂದು ಹೇಳಿದರು.

ಮುಖ್ಯ ಪಶು ವೈದ್ಯಾಧಿಕಾರಿ ಮತ್ತು ವಿಸ್ತರಣಾಧಿಕಾರಿ ಡಾ.ಮಧುಸೂಧನ್ ಹಾಗೂ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಟಿ.ಸಿ.ರಮೇಶ್ ಮಾತನಾಡಿ, ಮೇವಿನ ಕೊರತೆ ಆಗದಂತೆ ಅಗತ್ಯಕ್ಕೆ ಅನುಗುಣವಾಗಿ ಮೇವು ವಿತರಿಸಲಾಗುತ್ತಿದೆ ಎಂದರು.

ದೇವನಹಳ್ಳಿ ತಾಲ್ಲೂಕಿನಲ್ಲಿ 28 ಸಾವಿರ ಹಾಲು ನೀಡುತ್ತಿರುವ ಪಶುಗಳಿವೆ. ಪಶುಪಾಲಕರು ಆಧಾರ್ ಕಾರ್ಡ್ ಮತ್ತು ಅಧಿಕೃತ ದಾಖಲೆ ನೀಡಿದರೆ ಮೇವು ವಿತರಿಸಲಾಗುವುದು ಎಂದು ತಿಳಿಸಿದರು.

ಪಶು ವೈದ್ಯಕೀಯ ಇಲಾಖೆಯ ಅಧಿಕಾರಿ ಡಾ.ಶೃತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.