ADVERTISEMENT

ಸೂಲಿಬೆಲೆ: ಅದ್ದೂರಿ ವಿಘ್ನೇಶ್ವರ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 14:43 IST
Last Updated 15 ಸೆಪ್ಟೆಂಬರ್ 2019, 14:43 IST
ಸೂಲಿಬೆಲೆ ಪಟ್ಟಣದಲ್ಲಿ ದೇವರುಗಳನ್ನು ಮುತ್ತಿನ ಪಲ್ಲಕಿಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿಘ್ನೇಶ್ವರನನ್ನು ವಿಸರ್ಜಿಸಲಾಯಿತು
ಸೂಲಿಬೆಲೆ ಪಟ್ಟಣದಲ್ಲಿ ದೇವರುಗಳನ್ನು ಮುತ್ತಿನ ಪಲ್ಲಕಿಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿಘ್ನೇಶ್ವರನನ್ನು ವಿಸರ್ಜಿಸಲಾಯಿತು   

ಸೂಲಿಬೆಲೆ: ಪಟ್ಟಣದ ಕುರುಬರ ಪೇಟೆ ರೈತ ಯುವಕರ ಸಂಘದ ವತಿಯಿಂದ ವಿಘ್ನೇಶ್ವರ ಪ್ರತಿಷ್ಠಾಪನೆ ಮಾಡಲಾಗಿತ್ತು.

ಭಾನುವಾರ ಮೆರವಣಿಗೆಯಲ್ಲಿ ಗ್ರಾಮದ ಎಲ್ಲ ದೇವರುಗಳನ್ನು ಮುತ್ತಿನ ಪಲ್ಲಕಿಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಿ ವಿಘ್ನೇಶ್ವರನನ್ನು ವಿಸರ್ಜಿಸಲಾಯಿತು.

ವಿಸರ್ಜನೆ ಹಿಂದಿನ ದಿನ ವಾಡಿಕೆಯಂತೆ ಸಂಘದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಪಲ್ಲಕಿಗಳ ಮೆರವಣಿಗೆಯಲ್ಲಿ ಡೊಳ್ಳು ಕುಣೆತ, ವೀರಗಾಸೆ, ಕೀಲು ಕುದರೆ (ತಂಜಾವೂರು) ಇನ್ನೂ ಮುಂತಾದ ಸಾಂಸ್ಕೃತಿಕ ತಂಡಗಳು ಮನೋರಂಜನೆಯನ್ನು ನೀಡಿದವು.

ಪಟ್ಟಣದ ಕುರುಬರ ಪೇಟೆ ರೈತ ಯುವಕರ ಸಂಘದ ಅಧ್ಯಕ್ಷ ಹಾಲು ಮುನಿಕೃಷ್ಣಪ್ಪ (ಮೀಸೆ) ಅವರ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.