ADVERTISEMENT

ಪೋಷಕ ನಟ ಬೆಮೆಲ್‌ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 2:34 IST
Last Updated 4 ಮಾರ್ಚ್ 2021, 2:34 IST
ಬೆಮೆಲ್ ಸೋಮಣ್ಣ
ಬೆಮೆಲ್ ಸೋಮಣ್ಣ   

ದೊಡ್ಡಬಳ್ಳಾಪುರ: ಪೋಷಕನಟ ಬೆಮೆಲ್‌ ಸೋಮಣ್ಣ(77) ಅನಾರೋಗ್ಯ ದಿಂದ ನಿಧನರಾಗಿದ್ದಾರೆ.

ಮೃತರಿಗೆ ಒಬ್ಬ ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ಬುಧವಾರ ನಡೆಯಿತು.

‘ದೇವತಾ ಮನುಷ್ಯ’, ‘ನಮ್ಮೂರ ರಾಜ’ ಸೇರಿದಂತೆ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದ ಸೋಮಣ್ಣ ಅವರು, ಚಲನಚಿತ್ರ ನಿರ್ಮಾಣದ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.