
ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ನಗರದ ಫೈಟರ್ಸ್ ಟೆಕ್ವಾಂಡೋ ಅಕಾಡೆಮಿಯ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.
ಒಟ್ಟು 17 ಆಟಗಾರರು ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ, ಒಂದು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಕೆ.ಧಕ್ಷನ್ ಆದಿತ್ಯ ಶಾಲೆಯಿಂದ ರಾಷ್ಟ್ರೀಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ 14 ವರ್ಷ ವಯೋಮಾನದಲ್ಲಿ 23 ಕೆ.ಜಿ.ಯಲ್ಲಿ ಚಿನ್ನದ ಪದಕ ಗೆದ್ದು ನಾಗಲ್ಯಾಂಡ್ ನಲ್ಲಿ ನಡೆಯುವ ಟೆಕ್ವಾಂಡೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರು: 87 ಕೆ.ಜಿ. ವಿಭಾಗದಲ್ಲಿ ಬಿ.ತೇಜಸ್, 23 ಕೆ.ಜಿ. ವಿಭಾಗದಲ್ಲಿ ಕೆ.ದರ್ಶನ್.
ಸಬ್-ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ: 35 ಕೆ.ಜಿ. ವಿಭಾಗದಲ್ಲಿ ಸದಾಜಿತ್ ಸನಲ್, 45 ಕೆ.ಜಿ. ವಿಭಾಗಲ್ಲಿ ಸಿ.ತ್ರಿಶ್ವಂತ್‌ರೆಡ್ಡ.
50 ಕೆ.ಜಿ.ವಿಭಾಗದಲ್ಲಿ ಎಂ.ಲೋಕರಂಜನ್‌ಗೆ ಬೆಳ್ಳಿ, 49 ಕೆ.ಜಿ. ಕೇಡೆಟ್ ವಿಭಾಗದಲ್ಲಿ ಆದಿತ್ ಮಧುಸೂದನಗೆ ಕಂಚಿನ ಪದಕ,
ಸಬ್-ಜೂನಿಯರ್ ವಿಭಾಗ: 33 ಕೆ.ಜಿ. ವಿಭಾಗದಲ್ಲಿ ಮಯೂರೇಶ್ ಪ್ರಮೋದ್ ಪಾಟೀಲ್‌ಗೆ ಕಂಚಿನ ಪದಕ, ಸಬ್-ಜೂನಿಯರ್ 12 ವರ್ಷದ ಪೂಮ್ಸೇ ವಿಭಾಗದಲ್ಲಿ ಡಿ.ಮನ್ವಿತ್ ಗೌಡಗೆ ಕಂಚಿನ ಪದಕ, ಸಬ್-ಜೂನಿಯರ್ 29 ಕೆ.ಜಿ ವಿಭಾಗದಲ್ಲಿ ಆರವ್ ಕುಮಾರ್ ಪ್ರಮೋದ್ ಪಾಟೀಲ್‌ಗೆ ಕಂಚಿನ ಪದಕ, ಜೂನಿಯರ್ 51 ಕೆ.ಜಿ. ವಿಭಾಗದಲ್ಲಿ ಯಶಶ್ ವರ್ಣ ಕಂಚಿನ ಪದಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.