
ಪ್ರಜಾವಾಣಿ ವಾರ್ತೆ
ಆನೇಕಲ್: ಕಳ್ಳತನಕ್ಕೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದ ಶ್ರೀನಿಧಿ ವೈಭವ್ ಹೋಟೆಲ್ ಬೀಗ ಒಡೆದು ಒಳ ನುಗ್ಗಿದ ಕಳ್ಳನಿಗೆ ಕ್ಯಾಶ್ ಕೌಂಟರ್‌ನಲ್ಲಿ ಏನು ಸಿಗದ ಕಾರಣ ದೇವರಿಗಾಗಿ ಇಟ್ಟಿದ್ದ ₹2,500 ಹಣ ಕಳ್ಳತನ ಮಾಡಿದ್ದಾನೆ.
ಮಧ್ಯರಾತ್ರಿಯಲ್ಲಿ ಹೋಟೆಲ್‌ಗೆ ನುಗ್ಗಿದ ಕಳ್ಳ ಕ್ಯಾಶ್ ಕೌಂಟರ್ ಬೀಗವನ್ನು ಸ್ಕ್ರೂ ಡ್ರೈವರ್ ಮೂಲಕ ತೆಗೆದಿದ್ದಾನೆ. ಆದರೆ ಕ್ಯಾಶ್ ಕೌಂಟರ್‌ನಲ್ಲಿ ಏನು ಇಲ್ಲದ ಕಾರಣ ದೇವರ ಮುಂದೆ ಇಟ್ಟಿದ್ದ ಕಾಣಿಕೆ ಕಳ್ಳತನ ಮಾಡಿದ್ದಾನೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.