ಆನೇಕಲ್ : ಕೈಯಲ್ಲಿ ಹರಿತವಾದ ಆಯುಧವಿಟ್ಟುಕೊಂಡ ಚಡ್ಡಿ ಗ್ಯಾಂಗ್ ಮನೆ ಹಾಗೂ ಶಾಲೆಯಲ್ಲಿ ಕಳವು ಮಾಡಿರುವ ಘಟನೆ ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಲಾಪುರದಲ್ಲಿ ನಡೆದಿದೆ.
ಐದು ಮಂದಿ ಕೈಯಲ್ಲಿ ಹರಿತವಾದ ಆಯುಧ ಇಟ್ಟುಕೊಂಡು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸರ್ಜಾಪುರದ ವಿವಿಧೆಡೆ ಇದೇ ರೀತಿಯ ಕಳವು ಪ್ರಕರಣ ವರದಿಯಾಗಿದೆ. ಬಿಲ್ಲಾಪುರದ ಕಾನ್ಫಿಡೆಂಟ್ ಬೆಲ್ಲಟಿಕ್ಸ್ ಲೇಔಟ್‌ನಲ್ಲಿ ಚಿರಾಗ್ ಅಶೋಕ್ ಕುಮಾರ್ ಎಂಬುವವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆ ಬೀಗ ಹೊಡೆದು ₹30ಸಾವಿರ ಹಣ ಕಳವು ಮಾಡಲಾಗಿದೆ.
ಇಂಡಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿಯೂ ಇದೇ ತಂಡ ಕಳ್ಳತನ ಮಾಡಿದೆ. ಮುಳ್ಳುತಂತಿ ಕಟ್ ಮಾಡಿ ಚಡ್ಡಿ ಗ್ಯಾಂಗ್ ಕೈಚಳಕ ತೋರಿದೆ. ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕಳವು ನಡೆಸಲಾಗಿದೆ. ಈ ಗುಂಪಿನ ಕಳ್ಳತನದಿಂದಾಗಿ ಸುತ್ತಮುತ್ತಲ ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಜಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.