ADVERTISEMENT

ಚನ್ನಪಟ್ಟಣ: ಕುಸಿದು ಬಿದ್ದ ಚೌಡೇಶ್ವರಿ ದೇವಾಲಯದ ಗೋಪುರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 8:54 IST
Last Updated 12 ಜೂನ್ 2020, 8:54 IST
ಚನ್ನಪಟ್ಟಣ ತಾಲ್ಲೂಕಿನ ಮಳೂರುಪಟ್ಟಣದಲ್ಲಿ ಚೌಡೇಶ್ವರಿ ದೇವಾಲಯದ ಗೋಪುರ ಕುಸಿದು ಬಿದ್ದಿದೆ
ಚನ್ನಪಟ್ಟಣ ತಾಲ್ಲೂಕಿನ ಮಳೂರುಪಟ್ಟಣದಲ್ಲಿ ಚೌಡೇಶ್ವರಿ ದೇವಾಲಯದ ಗೋಪುರ ಕುಸಿದು ಬಿದ್ದಿದೆ   

ಚನ್ನಪಟ್ಟಣ: ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ಇದ್ದ ಚೌಡೇಶ್ವರಿ ದೇವಾಲಯದ ಗೋಪುರ ಬುಧವಾರ ರಾತ್ರಿ ಕುಸಿದು ಬಿದ್ದಿದೆ.

₹40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಸಾಗುತ್ತಿತ್ತು. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯ ಚೋಳರ ಕಾಲದ್ದು. ಹಳೆ ಗೋಪುರ ಕೆಡವಿ ಹೊಸ ಗೋಪುರ ನಿರ್ಮಾಣ ನಡೆದಿತ್ತು. ಸುಮಾರು 2 ವರ್ಷದಿಂದ ದೇವಾಲಯದ ಕಾಮಗಾರಿ ನಡೆಯುತ್ತಿತ್ತು. ಆದರೆ, ಗುತ್ತಿಗೆ ಪಡೆದಿದ್ದ ತಮಿಳುನಾಡು ಮೂಲದ ವ್ಯಕ್ತಿ ಮಾಡಿರುವ ಕಳಪೆ ಕಾಮಗಾರಿಯಿಂದ ಈ ದುರಂತ ನಡೆದಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ವಿಷಯ ತಿಳಿದು ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.