ADVERTISEMENT

ದೇವನಹಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 8:00 IST
Last Updated 2 ಸೆಪ್ಟೆಂಬರ್ 2020, 8:00 IST
ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಗಳೊಂದಿಗೆ ಪೊಲೀಸರು
ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಗಳೊಂದಿಗೆ ಪೊಲೀಸರು   

ದೇವನಹಳ್ಳಿ: ಅಕ್ರಮ ಗಾಂಜಾ ಮಾರಾಟಕ್ಕೆಯತ್ನಿಸುತ್ತಿರುವ ವೇಳೆ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಇಲ್ಲಿನ ಏರ್‌ಲೈನ್‌ ಡಾಬಾ ಬಳಿ ನಡೆದಿದೆ.

ಬಂಧಿತ ಆರೋಪಿಗಳಾದ ಮುನಿರಾಜು ಹಾಗೂ ನಾಗೇಶ್ ಅವರಿಂದ ₹1.75 ಲಕ್ಷ ಮೌಲ್ಯದ 3.5 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ರಸ್ತೆ ಕಡೆಯಿಂದ ಗಾಂಜಾ ತಂದಿರುವುದಾಗಿ ಆರೋಪಿಗಳು ತಿಳಿಸಿದ್ದು ಗಾಂಜಾ ಅಕ್ರಮ ಮಾರಾಟ ವಹಿವಾಟುವಿನ ಬೃಹತ್ ಜಾಲದ ಮಾಹಿತಿ ಲಭ್ಯವಾಗಿದ್ದು ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಎ.ಸಿ.ಪಿ ಸುಬ್ರಮಣಿ
ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.