ಯೂರಿಯಾ
ಪ್ರಜಾವಾಣಿ ಚಿತ್ರ
ದೇವನಹಳ್ಳಿ: ಸಸ್ಯಗಳಿಗೆ ಯೂರಿಯಾ ಹೆಚ್ಚು ಪೋಷಕಾಂಶ ಒದಗಿಸುತ್ತದೆ. ಇದರ ಬಳಕೆ ಹೆಚ್ಚಾದಷ್ಟು ಅಮೃತ ಕೂಡ ವಿಷವಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಯೂರಿಯಾ ಅತಿಯಾದ ಬಳಕೆಯಿಂದ ಸಸ್ಯಗಳ ಬೆಳವಣಿಗೆ ದುರ್ಬಲವಾಗಿ ಹೂವು ಮತ್ತು ಹಣ್ಣಿನ ಇಳುವರಿ ಕುಂಠಿತವಾಗುವುದರ ಜೊತೆಗೆ ಕೀಟ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಮತ್ತು ಪರಿಸರ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ರಾಗಿ ಬೆಳೆಗೆ ಕೃಷಿ ವಿಶ್ವವಿದ್ಯಾಲಯ ಶಿಫಾರಸ್ಸಿನಂತೆ ಸಾರಜನಕ ಪ್ರಮಾಣ ಒಂದು ಎಕರೆಗೆ 45 ಕೆ.ಜಿ ಯೂರಿಯಾ ಸಿಂಪಡಣೆ ಮಾಡಬೇಕು. ಈಗಾಗಲೇ ಬಿತ್ತನೆ ಸಮಯದಲ್ಲಿ ಅರ್ಧದಷ್ಟು ಸಾರಜನಕವನ್ನು ಯೂರಿಯಾ ಮತ್ತು ಡಿಎಪಿ ಮೂಲಕ ಸಿಂಪರಣೆ ಮಾಡುವುದರಿಂದ ಉಳಿದ ಅರ್ಧದಷ್ಟು ಸಾರಜನಕವನ್ನು ಅಂದರೆ ಸುಮಾರು 22-23 ಕೆ.ಜಿ ಯೂರಿಯಾ ಎರಡು ಹಂತಗಳಲ್ಲಿ ಹಾಕಬೇಕು. ರಾಗಿ ಬೆಳವಣಿಗೆ 20-25 ದಿನದೊಳಗೆ ಒಮ್ಮೆ ಹಾಗೂ ಮತ್ತೊಮ್ಮೆ 30-45 ದಿನದೊಳಗೆ ಹಾಕಿದಾಗ ಉತ್ತಮ ಇಳುವರಿ ಸಿಗುತ್ತದೆ ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.