
ವಿಜಯಪುರ (ದೇವನಹಳ್ಳಿ): ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಹಾರ್ಡಿಪುರ ಕ್ಷೇತ್ರದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ 29 ಮತ್ತು 30 ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯಲಿವೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ 20 ಸಾವಿರ ಲಡ್ಡು ವಿತರಿಸಲಾಗುತ್ತಿದೆ ಎಂದು ದೇವಾಲಯದ ಧರ್ಮದರ್ಶಿ ಎಂ.ಶ್ರೀನಿವಾಸಪ್ಪ ತಿಳಿಸಿದರು.
29ರಂದು ಸೋಮವಾರ ದೇವಾಲಯದಲ್ಲಿ ಅನುಜ್ಞೆ, ಸ್ವಸ್ತಿವಾಚನ, ಭಗವದ್ ವಾಸುದೇವ ಪುಣ್ಯಾಹ ವಾಚನ, ರಕ್ಷಾಬಂಧನ, ಕಳಸಾರಾಧನೆ, ಅಗ್ನಿಪ್ರತಿಷ್ಠೆ, ನಾರಸಿಂಹ, ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಹೋಮಗಳು ನಡೆಯಲಿವೆ. 30ರಂದು ಬೆಳಿಗ್ಗೆ 5.10 ಕ್ಕೆ ಸಪ್ತದ್ವಾರದ ಪೂಜೆ ಮತ್ತು ಉತ್ತರದ್ವಾರ ಪ್ರವೇಶ ವಿಶೇಷ ಅಲಂಕಾರದೊಂದಿಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ, ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷ್ಮೀವೆಂಕಟೇಶ್ವರಸ್ವಾಮಿ ವಿಶೇಷ ದರ್ಶನ ಏರ್ಪಡಿಸಲಾಗಿದೆ ತಿಳಿಸಿದರು.
ಶಿವನಾಪುರ ಮಠದ ಪ್ರಣವಾನಂದ ಸ್ವಾಮಿ, ಬುಳ್ಳಹಳ್ಳಿ ಮಠದ ಸಾಯಿಮಂಜುನಾಥ್ ಮಹಾರಾಜ್, ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇವಾಲಯದ ಪ್ರಧಾನ ಅರ್ಚಕ ನಾಗರಾಜಪ್ಪಸ್ವಾಮಿ, ತಿಮ್ಮಹಳ್ಳಿ ಕಾಳಿಕಾದೇವಿ ಆರಾಧಕ ರಾಜುಸ್ವಾಮಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.