
ಜಿಗಣಿ (ಆನೇಕಲ್) : ಜಿಗಣಿ ರೆಡ್ಡಿ ಜನಸಂಘ ಭಾನುವಾರ ಮಹಾಯೋಗಿ ವೇಮನ ಜಯಂತಿ ಆಯೋಜಿಸಲಾಗಿತ್ತು. ಜಿಗಣಿ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು.
ಯೋಗಿ ವೇಮನ ಭಾವಚಿತ್ರವನ್ನು ಅಲಂಕೃತ ಮಲ್ಲಿಗೆ ಹೂವುಗಳ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಜಿಗಣಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ನಂದಿಧ್ವಜ, ತಮಟೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು.
ವೇಮನರು ತತ್ವ ಪದ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ್ದಾರೆ. ಸಾಧಕರು ಮತ್ತು ತತ್ವ ಜ್ಞಾನಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಅವರಲ್ಲಿನ ತತ್ವ, ಸಿದ್ದಾಂತ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆನೇಕಲ್ ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಹೆನ್ನಾಗರ ಬಾಬುರೆಡ್ಡಿ ಹೇಳಿದರು.
ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಮಾತನಾಡಿ ಬಸವಣ್ಣ, ಕನಕದಾಸರು, ಅಂಬೇಡ್ಕರ್, ವೇಮನ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬಹುದೊಡ್ಡ ತಪ್ಪಾಗಿದೆ. ಇವರೆಲ್ಲರೂ ವಿಶ್ವಮಾನವಾಗಿದ್ದು ವೇಮನರಾದಿಯಾಗಿ ಬಸವಾದಿ ಶರಣರು ಮನುಕುಲದ ಶ್ರೇಯಸ್ಸಿಗೆ ತಮ್ಮ ಬದುಕು ಧಾರೆ ಎರೆದಿದ್ದಾರೆ. ಅವರ ಸಿದ್ದಾಂತಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಗಣಿ ಪುರಸಭಾ ಸದಸ್ಯರಾದ ಪ್ರಹ್ಲಾದರೆಡ್ಡಿ, ಜಿಗಣಿ ಪುನೀತ್, ಹುಲಿಮಂಗಲ ರಾಜಗೋಪಾಲರೆಡ್ಡಿ, ಕೇಶವರೆಡ್ಡಿ, ಕೃಷ್ಣಾರೆಡ್ಡಿ, ನೊಸೇನೂರು ರಾಜಶೇಖರರೆಡ್ಡಿ, ರಾಮಸ್ವಾಮಿರೆಡ್ಡಿ, ಮಧುರೆಡ್ಡಿ, ಚಿರಾಗ್, ರಾಮಚಂದ್ರರೆಡ್ಡಿ, ಭುವನ್ ರೆಡ್ಡಿ, ಹರೀಶ್ ರೆಡ್ಡಿ, ಸೋಮಶೇಖರ್, ಲಕ್ಷ್ಮೀಕಾಂತ್, ರಾಜಾರೆಡ್ಡಿ, ಶಾಂತಕುಮಾರ್, ಬಂಡೆನಲ್ಲಸಂದ್ರ ಮೋಹನ್‌ರೆಡ್ಡಿ, ನೊಸೇನೂರು ರವಿ, ಹಾರಗದ್ದೆ ಅಮರನಾಥ್, ರವಿಚಂದ್ರ, ಹೆನ್ನಾಗರ ಎಚ್.ವಿ.ಬಾಬುರೆಡ್ಡಿ, ಎಚ್.ಆರ್.ಮಧುಸೂದನ್‌ರೆಡ್ಡಿ, ಬಾಬು, ಹೇಮಕೇಶ್ ರೆಡ್ಡಿ, ಮಾದಪಟ್ಟಣ ಮುನಿರೆಡ್ಡಿ, ಗೌತಮ್, ಗೋಪಾಲರೆಡ್ಡಿ, ಮಲ್ಲಿಗೆ ಆನಂದ್, ಹೇಮಂತ್ ಬಾಬು, ಮಂಜುನಾಥರೆಡ್ಡಿ, ನಾರಾಯಣರೆಡ್ಡಿ, ನಾಗೇಶ್ ರೆಡ್ಡಿ, ವೆಂಕಟೇಶ್, ನಿಸರ್ಗ ಶಿವರಾಮರೆಡ್ಡಿ, ಗಿರೀಶ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.