ADVERTISEMENT

ವಿಜಯಪುರ: ಅನಧಿಕೃತ ಕಸಾಯಿಖಾನೆ ಬಂದ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:15 IST
Last Updated 8 ಆಗಸ್ಟ್ 2019, 13:15 IST
ವಿಜಯಪುರದ ರಹಮತ್‌ನಗರದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮಾಲೀಕರಿಗೆ, ಮಾಂಸ ಮಾರಾಟ ಮಾಡದಂತೆ ಪುರಸಭಾ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದರು
ವಿಜಯಪುರದ ರಹಮತ್‌ನಗರದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮಾಲೀಕರಿಗೆ, ಮಾಂಸ ಮಾರಾಟ ಮಾಡದಂತೆ ಪುರಸಭಾ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದರು   

ವಿಜಯಪುರ: ಪಟ್ಟಣದಲ್ಲಿ ಅನಧಿಕೃತ ಕಸಾಯಿಖಾನೆಗಳನ್ನು ಗುರುವಾರ ಪುರಸಭೆ ಅಧಿಕಾರಿಗಳು ಬಂದ್‌ ಮಾಡಿಸಿದರು.

ನೋಟಿಸ್‌ ಕೊಟ್ಟರೂ ಕಸಾಯಿಖಾನೆ ನಡೆಸುವವರು ಅಲಕ್ಷ್ಯ ವಹಿಸಿದ ಕಾರಣ ಮುಖ್ಯಾಧಿಕಾರಿಎ.ಎಚ್.ನಾಗರಾಜ್ ಅವರು ಪುರಸಭೆ ಸಿಬ್ಬಂದಿ ಮತ್ತು ಪೊಲೀಸರ ನೆರವಿನಿಂದ ಈ ಕೇಂದ್ರಗಳನ್ನು ಬಂದ್‌ ಮಾಡಿಸಿದರು.

ದನಗಳ ಕಟಾವು ಮಾಡಿದ ಸಂದರ್ಭದಲ್ಲಿ ಹೊರಬರುತ್ತಿರುವ ರಕ್ತ ಮತ್ತು ತ್ಯಾಜ್ಯಗಳಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ವಾಸನೆ ಬೀರುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸಾಕಷ್ಟು ಮಂದಿ ಜಿಲ್ಲಾಡಳಿತಕ್ಕೆ ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶವಿರುವ ಕಾರಣ ತಕ್ಷಣ ಅನುಮತಿಯಿಲ್ಲದ ದನದ ಮಾಂಸದ ಅಂಗಡಿಗಳನ್ನು ಮುಚ್ಚಬೇಕು ಎಂದು ಕೋರಿದರು. ಮಧ್ಯಾಹ್ನ 3 ಗಂಟೆಯವರೆಗೂ ಕಾದು ನೋಡಿದ ಅಧಿಕಾರಿಗಳು, ಕಸಾಯಿಖಾನೆ ಮಾಲೀಕರು ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಪೊಲೀಸ್‌ ನೆರವಿನಿಂದ ಬಂದ್‌ ಮಾಡಿಸಿದರು.

ADVERTISEMENT

ಆರೋಗ್ಯ ನಿರೀಕ್ಷಕ ಮಹೇಶ್‌ಕುಮಾರ್, ಸಹಾಯಕ ಎಂಜಿನಿಯರ್ ಪ್ರಭಾವತಿ, ಲೆಕ್ಕಾಧಿಕಾರಿ ಗೋಪಾಲ್, ಪೊಲೀಸ್ ಎಸ್.ಬಿ. ಕೃಷ್ಣನಾಯಕ್, ಕಾನ್‌ಸ್ಟೆಬಲ್ ವೆಂಕಟೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.